2nd PUC exam 2026: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.!
ಎಲ್ಲರಿಗೂ ನಮಸ್ಕಾರ.. ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆಯಿಂದ ವಾರ್ಷಿಕ ಪರೀಕ್ಷೆ ನಡೆಯಲಿದ್ದು ನಮ್ಮ ದೇಶದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪಿಯು, ಉತ್ತೀರ್ಣತೆಯ ಸ್ಥಾನ 26ನೇ ಸ್ಥಾನದಲ್ಲಿದೆ ಇದನ್ನು ಕನಿಷ್ಠ 10ನೇ ಸ್ಥಾನದ ಒಳಗೆ ತರಬೇಕು ಎಂಬ ಎಲ್ಲ ಪ್ರಯತ್ನವನ್ನು ರಾಜ್ಯ ಸರ್ಕಾರದಿಂದ ಮತ್ತು ಪರೀಕ್ಷಾ ಮಂಡಳಿ ಇಂದ ನಡೆಸಲಾಗುತ್ತಿದೆ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಗೆ ಸಿದ್ಧಪಡಿಸಲಾಗಿದೆ ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಅಂದರೆ ಫೆಬ್ರವರಿ 28ನೇ ದಿನಾಂಕದಿಂದ ಪರೀಕ್ಷೆ ನಡೆಯಲಿದ್ದು ಈಗಾಗಲೇ ರಾಜ್ಯ ಸರ್ಕಾರದಿಂದ ಮತ್ತು ಪರೀಕ್ಷಾ ಮಂಡಳಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ದ್ವಿತೀಯ ಪಿಯುಸಿ ಪರೀಕ್ಷೆ (2nd PUC) 2026.
ದ್ವಿತೀಯ ಪಿಯುಸಿ ಪರೀಕ್ಷೆ (2nd PUC) ವಿದ್ಯಾರ್ಥಿಗಳ ವಿದ್ಯಾಭ್ಯಾಸ ಜೀವನದಲ್ಲಿ ಅತ್ಯಂತ ಮಹತ್ವದ ಹಂತವಾಗಿದೆ. ಕರ್ನಾಟಕದಲ್ಲಿ ಈ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸುತ್ತದೆ. ಪ್ರಥಮ ಪಿಯುಸಿ ನಂತರದ ಎರಡನೇ ವರ್ಷದ ಅಧ್ಯಯನದ ಕೊನೆಯಲ್ಲಿ ಈ ಪರೀಕ್ಷೆ ನಡೆಯುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಹಾಗೂ ವೃತ್ತಿ ಆಯ್ಕೆಯನ್ನು ನಿರ್ಧರಿಸುವಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಮಹತ್ತರ ಪಾತ್ರವಹಿಸುತ್ತದೆ.
ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲೆ ಎಂಬ ಮೂರು ಪ್ರಮುಖ ವಿಭಾಗಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಭವಿಷ್ಯದ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ವಿಷಯಗಳನ್ನು ಆಯ್ಕೆಮಾಡುತ್ತಾರೆ. ವೈದ್ಯಕೀಯ, ಇಂಜಿನಿಯರಿಂಗ್, ಸಿಎ, ಬಿ.ಕಾಂ, ಬಿ.ಎ. ಮೊದಲಾದ ಉನ್ನತ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿ ಅಂಕಗಳು ಅತ್ಯಂತ ಮುಖ್ಯವಾಗಿವೆ. ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಅಂಕಗಳು ಅರ್ಹತಾ ಮಾನದಂಡವಾಗಿವೆ.
ಈ ಪರೀಕ್ಷೆ ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ವಿದ್ಯಾರ್ಥಿಗಳು ಒಂದು ವರ್ಷದ ಪರಿಶ್ರಮವನ್ನು ಈ ಪರೀಕ್ಷೆಯಲ್ಲಿ ತೋರಿಸಬೇಕಾಗುತ್ತದೆ. ಸರಿಯಾದ ವೇಳಾಪಟ್ಟಿ ರೂಪಿಸಿ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಪುನರವಲೋಕನ, ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮತ್ತು ಸಮಯ ನಿರ್ವಹಣೆ ಅತ್ಯಂತ ಅಗತ್ಯವಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಜವಾಬ್ದಾರಿತನವನ್ನು ಬೆಳೆಸುತ್ತದೆ. ಈ ಹಂತವನ್ನು ಯಶಸ್ವಿಯಾಗಿ ದಾಟಿದವರು ತಮ್ಮ ಮುಂದಿನ ವಿದ್ಯಾಭ್ಯಾಸದ ದಾರಿಯನ್ನು ಸುಗಮವಾಗಿ ಆಯ್ಕೆಮಾಡಬಹುದು. ಆದ್ದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಸಮರ್ಪಕವಾಗಿ ಸಿದ್ಧತೆ ಮಾಡಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ.
ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.!
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಇದೇ ಫೆಬ್ರವರಿ 28ನೇ ದಿನಾಂಕದಿಂದ ಆರಂಭಗೊಳ್ಳಲಿದ್ದು ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದ ರಾಜ್ಯದ ದ್ವಿತೀಯ ಪಿಯುಸಿ ಉತ್ತೀರ್ಣತೆಯ ಸ್ಥಾನವನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ಹೊಸ ಹೊಸ ಬದಲಾವಣೆಗಳನ್ನು ಈ ವರ್ಷ ಮಾಡಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನವೇ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ ಏಕೆಂದರೆ ರಾಜ್ಯದ ಉತ್ತೀರ್ಣತೆಯ ಸ್ಥಾನವು 26ನೇ ಸ್ಥಾನದಲ್ಲಿ ಇದ್ದು ಅದನ್ನು ಕನಿಷ್ಠ 10ನೇ ಸ್ಥಾನದ ಒಳಗೆ ತರ ಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮೊಟ್ಟಮೊದಲ ಬಾರಿಗೆ ಅಂತಿಮ ಪರೀಕ್ಷೆಗೂ ಮೊದಲೇ ಐದು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪೂರ್ವ ಪರೀಕ್ಷೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗೆಲ್ಲುವ ಹಾದಿಯನ್ನು ಸುಲಭಗೊಳಿಸಿದೆ.
ಜನವರಿ ಎರಡನೇ ದಿನಾಂಕದಿಂದ 17ನೇ ದಿನಾಂಕದವರೆಗೆ ದ್ವಿತೀಯ ಪಿಯುಸಿಯ ಮೊದಲ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿತ್ತು ಬಳಿಕ ಜನವರಿ 19 ರಿಂದ ಫೆಬ್ರವರಿ 2ನೇ ದಿನಾಂಕದವರೆಗೆ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿದೆ ಅದೇ ರೀತಿ ವಿದ್ಯಾರ್ಥಿಗಳಿಗೆ 2 ರಿಂದ 3 ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನೀಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವಂತೆ ಮಾಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಂದು ಹೊಸ ಬದಲಾವಣೆ.?
ಹೌದು ದ್ವಿತೀಯ ಪಿಯುಸಿಯಲ್ಲಿ ಮೂರು ವಿಭಾಗಗಳು ಇರುತ್ತವೆ ಇದರಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳು ಇದ್ದು ಈ ಪರೀಕ್ಷೆಗಳಲ್ಲಿ ಈ ಮೊದಲು ವಿದ್ಯಾರ್ಥಿಗಳಿಗೆ 100 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಇದರಿಂದ ಕನಿಷ್ಠ ಪಾಸ್ ಅಂಗಗಳನ್ನು ಕೂಡ ವಿದ್ಯಾರ್ಥಿಗಳ ಬರೆಯುವ ಮೂಲಕ ಗಳಿಸಿ ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಬೇಕಾಗಿತ್ತು ಆದರೆ ಇದೀಗ ಪಿಯುಸಿ ಪರೀಕ್ಷೆಯಲ್ಲಿ ಒಂದು ಹೊಸ ಬದಲಾವಣೆಯನ್ನು ತಂದಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ಅಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ 80 ಅಂಕಗಳಿಗೆ ಪರೀಕ್ಷೆಯನ್ನು ನೀಡಲಾಗುತ್ತಿದೆ ಮತ್ತು 20 ಅಂಕಗಳು ಇಂಟರ್ನಲ್ ಅಂಕಗಳನ್ನಾಗಿ ನೀಡಲಾಗುತ್ತಿದೆ. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಕೇವಲ 80 ಅಂಕಗಳಿಗೆ 24 ಅಂಕ ಬಂದರೆ ಸಾಕು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಬಹುದಾಗಿದೆ ಇನ್ನು ಇಂಟರ್ನಲ್ ಅಂಕದಲ್ಲಿ 10 ಅಂಕ ಬಂದರೆ ಕನಿಷ್ಠ 34 ಅಂಕ ಗ್ಯಾರಂಟಿ ಯಾಗುತ್ತದೆ ಇದರಿಂದ ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತೀರ್ಣತೆಯ ಸ್ಥಾನ ಈ ಬಾರಿ ಮತ್ತಷ್ಟು ಹೆಚ್ಚಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90 ರಷ್ಟು ವಿದ್ಯಾರ್ಥಿಗಳು ಪಾಸ್.?
ಹೌದು ಈಗಾಗಲೇ ತಿಳಿಸಿದ ಹಾಗೆ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸ ಬದಲಾವಣೆಯನ್ನು ತಂದಿದ್ದು 80 ಅಂಕಗಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನೀಡಲಾಗುತ್ತಿದೆ ಇದರಲ್ಲಿ ಕೇವಲ 24 ಹಂಕಗಳಿದ್ದರೆ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ ಮತ್ತು 20 ಅಂಕಗಳ ಇಂಟರ್ನಲ್ ಅಂಕವನ್ನು ನೀಡಲಾಗುತ್ತಿದ್ದು ಇದರಲ್ಲಿ ಕನಿಷ್ಠ 10 ಅಂಕ ಪಡೆದರೆ ವಿದ್ಯಾರ್ಥಿಗೆ 35 ರಿಂದ 40 ಅಂಕ ಗ್ಯಾರಂಟಿ ಆಗಲಿದೆ ಇದರಿಂದ ಈ ಬಾರಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣತೆ ಸ್ಥಾನ ಎಚ್ಚಲಿದೆ ಎಂದು ಮಾಹಿತಿ ನೀಡಲಾಗಿದೆ ಜೊತೆಗೆ ಈ ಬಾರಿ ವಿದ್ಯಾರ್ಥಿಗಳಿಗೆ ಈಗಾಗಲೇ ಮೂರು ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನೀಡಲಾಗಿದ್ದು ಇದರಿಂದ ಕನಿಷ್ಠ 90% ವಿದ್ಯಾರ್ಥಿಗಳು ಇದರಿಂದ ಪರೀಕ್ಷೆಯಲ್ಲಿ ಪಾಸ್ ಆಗಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವ ವಿಭಾಗದಿಂದ ಎಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ.
ಎಸ್ ಎಸ್ ಎಲ್ ಸಿ ನಂತರದಲ್ಲಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ವಿದ್ಯಾಭ್ಯಾಸದ ಆಯ್ಕೆಗೆ ಪಿಯುಸಿ ಸೇರುವ ಸಮಯದಲ್ಲಿ ಮೂರು ವಿಭಾಗಗಳನ್ನು ವಿಭಜಿಸಲಾಗಿದೆ ಇದರಲ್ಲಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು ಇದರಲ್ಲಿ 2026 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 7,10,000 363 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಇದರಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಒಟ್ಟು 6,46,801 ವಿದ್ಯಾರ್ಥಿಗಳು ಇದ್ದರೆ ಮರು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಸುಮಾರು 50,540 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಇದರಲ್ಲಿ ಖಾಸಗಿ ಅಭ್ಯರ್ಥಿಗಳಾಗಿ 13,022 ವಿದ್ಯಾರ್ಥಿಗಳಿದ್ದಾರೆ.
ದ್ವಿತೀಯ ಪಿಯುಸಿ ವಿಭಾಗವಾರು ನೋಂದಣಿ.
ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಒಟ್ಟು 292,645 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ಒಟ್ಟು 2,11,174 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯಲಿದ್ದಾರೆ
ಕಲಾ ವಿಭಾಗದಲ್ಲಿ ಒಟ್ಟು 1,42,982 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿ ಇಂದ ಮಾಹಿತಿಯನ್ನು ನೀಡಲಾಗಿದೆ ಧನ್ಯವಾದಗಳು..