Dairy shed subsidy ಗ್ರಾಮೀಣ ಪ್ರದೇಶದ ರೈತರು ಕೃಷಿ ಮತ್ತು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು ಸರ್ಕಾರದಿಂದ ರೈತರಿಗಾಗಿ ಪ್ರತಿ ವರ್ಷ ಒಂದೊಂದು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಅಂತಹ ಯೋಜನೆಗಳಲ್ಲಿ ಧನದ ಕೊಟ್ಟಿಗೆ ನಿರ್ಮಾಣ ಮಾಡಲು ಸಹಾಯಧನ ನೀಡುವ ಈ ಯೋಜನೆ ಕೂಡ ಒಂದಾಗಿದೆ ಕೇವಲ ಸರ್ಕಾರ ಧನದ ಕೊಟ್ಟಿಗೆ ನಿರ್ಮಾಣಕ್ಕೆ ಮಾತ್ರವಲ್ಲದೆ ಕೋಳಿ ಸಾಕಾಣಿಕೆ, ಕುರಿ ಶೇಡ್, ಹಂದಿ ಸಾಕಾಣಿಕೆ, ಮತ್ತು ಇನ್ನಿತರ ಪ್ರಾಣಿಗಳ ಸಾಕಾಣಿಕೆಗಾಗಿ ಶೆಡ್ ನಿರ್ಮಿಸಲು ಸಹಾಯಧನವನ್ನು ನೀಡುತ್ತಿದೆ.
ಸದ್ಯ ಇದೀಗ 2026 ನೇ ಸಾಲಿನ ದನದ ದನದ ಕೊಟ್ಟಿಗೆ ನಿರ್ಮಾಣದ ಸಹಾಯಧನವನ್ನು ಸರ್ಕಾರದಿಂದ ಅರ್ಹ ರೈತರಿಗೆ ನೀಡಲು ಮುಂದಾಗಿದೆ. ಹೌದು ರೈತರು ನಮ್ಮ ಭಾರತ ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ ಏಕೆಂದರೆ ನಮ್ಮ ಭಾರತ ದೇಶವು ಕೃಷಿಯ ಮೇಲೆ ಅವಲಂಬಿತ ಆಗಿದೆ, ಹಾಗಾಗಿ ಸರ್ಕಾರದಿಂದ ಗ್ರಾಮೀಣ ಭಾಗದ ಹಳ್ಳಿ ಜನರಿಗೆ ಊರಿನಲ್ಲಿಯೇ ಏನಾದರೂ ಮಾಡಬೇಕು ಅಥವಾ ದುಡಿಯಬೇಕು ಎಂದು ಯೋಚಿಸುತ್ತಿರುವ ರೈತರಿಗಾಗಿ ದಾನದ ಕೊಟ್ಟಿಗೆ ನಿರ್ಮಾಣದ ಸಹಾಯಧನವನ್ನು ನೀಡುತ್ತಿದೆ ಈ ಯೋಜನೆಯ ಮೂಲಕ ಕೊಟ್ಟಿಗೆ ನಿರ್ಮಾಣಕ್ಕೆ 56,000 ರೂಪಾಯಿಗಳಿಂದ 70000 ವರೆಗೆ ಸಹಾಯಧನವನ್ನು ಪಡೆಯಬಹುದಾಗಿದೆ.
ದನದ ಕೊಟ್ಟಿಗೆ ನಿರ್ಮಾಣಕ್ಕೆ ರೈತರಿಗೆ 70,000 ಸಹಾಯ ಸಹಾಯಧನ.!
ಹೈನುಗಾರಿಕೆ ಮಾಡಬೇಕು ಎಂದು ಯೋಚಿಸುತ್ತಿರುವ ರೈತರಿಗಾಗಿ ಸರ್ಕಾರದಿಂದ ಒಂದು ಹೊಸ ಯೋಜನೆಯನ್ನು ಜಾರಿ ಮಾಡಲಾಗಿದೆ ಈ ಯೋಜನೆ ಅಡಿಯಲ್ಲಿ ದನದ ಕೊಟ್ಟಿಗೆ ಅಥವಾ ಕುರಿ ಶೆಡ್ , ಕೋಳಿ ಹಂದಿ ಹೆಮ್ಮೆ ಹೀಗೆ ಎಲ್ಲಾ ರೀತಿಯ ಸಾಕು ಪ್ರಾಣಿಗಳನ್ನು ಸಾಕಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದೆ. ಹೌದು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಎಂಬುದು ಕಣ್ಮರೆ ಆಗಿದೆ ಏಕೆಂದರೆ ಯುವಕರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ನೀಡದೆ ಇರುವ ಕಾರಣ ಹೈನುಗಾರಿಕೆ ಎಂದು ಕಡಿಮೆ ಆಗುತ್ತಾ ಬಂದಿದೆ ಹಾಗಾಗಿ ಸರ್ಕಾರದಿಂದ ಯುವ ರೈತರನ್ನು ಮತ್ತು ಹೈನುಗಾರಿಕೆ ಮಾಡಲು ಆಸಕ್ತಿ ಹೊಂದಿರುವವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ರೈತರಿಗೆ ಧನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತಿದೆ.
ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಯೋಜನೆಯ ಪರಿಚಯ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತಿದೆ ಇದು 2026ನೇ ಸಾಲಿನ ಕೇಂದ್ರ ಸರ್ಕಾರದ ಮೊದಲ ಯೋಜನೆ ಆಗಿದ್ದು ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ 57 ಸಾವಿರ ರೂಪಾಯಿಗಳಿಂದ 70000 ವರೆಗೆ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತಿದೆ. ಈಗಾಗಲೇ ಹೇಳಿದ ಹಾಗೆ ಈ ಯೋಜನೆ ಅಡಿಯಲ್ಲಿ ದನದ ಕೊಟ್ಟಿಗೆ ಜೊತೆಗೆ ಕುರಿ, ಕೋಳಿ, ಹಂದಿ, ಹೆಮ್ಮೆ ಮತ್ತು ಇನ್ನಿತರ ಸಾಕು ಪ್ರಾಣಿಗಳ ಕೊಟ್ಟಿಗೆ ನಿರ್ಮಾಣಕ್ಕೆ ಈ ಯೋಜನೆ ಅಡಿಯಲ್ಲಿ ಸಹಾಯಧನನ್ನು ನೀಡಲಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.?
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಧನದ ಕೊಟ್ಟಿಗೆ ನಿರ್ಮಾಣಕ್ಕೆ 57 ಸಾವಿರ ರೂಪಾಯಿಗಳಿಂದ 70000 ವರೆಗೆ ಸಹಾಯಧನವನ್ನು ನೀಡಲಾಗುತ್ತಿದ್ದು ಈ ಯೋಜನೆಗೆ ಹೈನುಗಾರಿಕೆ ಮಾಡುವ ಆಸಕ್ತಿ ಹೊಂದಿರುವಂತಹ ರೈತರು ಅರ್ಜಿ ಸಲ್ಲಿಸಲು ಸರ್ಕಾರದಿಂದ ಸೂಚನೆ ನೀಡಲಾಗಿದೆ ಆದರೆ ಸರ್ಕಾರ ಕೆಲವು ಅರ್ಹತೆಗಳು ಇರಬೇಕು ಎಂದು ತಿಳಿಸಿದ್ದು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಮೀಣ ಭಾಗಕ್ಕೆ ಒಳಪಟ್ಟಿರಬೇಕು.
- ಅರ್ಜಿ ಸಲ್ಲಿಸುವ ಕುಟುಂಬದವರ ಯಾವುದಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್ ಇರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಹೆಸರಿನಲ್ಲಿ ಕಡ್ಡಾಯವಾಗಿ ಸ್ವಂತ ಜಾಗ ಇರಬೇಕು
- ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಬ್ಯಾಂಕ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
- ಇನ್ನು ಈಗಾಗಲೇ ಈ ಯೋಜನೆ ಅಡಿಯಲ್ಲಿ ನೀವು ಅಥವಾ ನಿಮ್ಮ ಮನೆಯ ಸದಸ್ಯರು ಸಹಾಯಧನವನ್ನು ಪಡೆದಿದ್ದರೆ ಈಗ ಅರ್ಜಿ ಸಲ್ಲಿಸಲು ಸಾಧ್ಯ ಇಲ್ಲ.
ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಇನ್ನು ಈಗಾಗಲೇ ತಿಳಿಸಿದ ಹಾಗೆ ಈ ಯೋಜನೆ ಅಡಿಯಲ್ಲಿ 57000ಗಳಿಂದ 70000 ವರೆಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ ಹಾಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಲವು ದಾಖಲೆಗಳನ್ನು ಹೊಂದಿರಲೇಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್
- ಅಭ್ಯರ್ಥಿಯ ಜಮೀನಿನ ಹಕ್ಕುಪತ್ರ
- ಅಭ್ಯರ್ಥಿಯ ಅಥವಾ ಅವರ ಮನೆಯ ಸದಸ್ಯರಲ್ಲಿ ಯಾರಾದರೂ ಒಬ್ಬರ ಜಾಬ್ ಕಾರ್ಡ್
- ಈಗಾಗಲೇ ಪಶು ಸಾಗುತ್ತಿದ್ದೀರಿ ಎನ್ನುವ ದಾಖಲೆ
- ಬ್ಯಾಂಕ್ ಪಾಸ್ ಬುಕ್
- ಅರ್ಜಿ ಫಾರ್ಮ್
ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಜೊತೆಗೆ ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ DBTಲಿಂಕ್ ಆಗಿರಬೇಕಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ.?
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಧನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದ್ದು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು.
- ಮೊದಲು ನಿಮ್ಮ ಹತ್ತಿರದ ಅಥವಾ ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ
- ಕಚೇರಿಗೆ ಸಂಬಂಧಿಸಿದ ಸಿಬ್ಬಂದಿಯ ಬಳಿ ಅಂದರೆ PDO ಹತ್ತಿರ ನರೇಗಾ ಯೋಜನೆ ಅಡಿಯಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಪಡೆಯುವ ಅರ್ಜಿಯನ್ನು ಪಡೆಯಿರಿ
- . ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ದಾಖಲಾತಿಯನ್ನು ಭರ್ತಿ ಮಾಡಿ
- ನಂತರ ಈ ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳನ್ನು ಹೊಂದಿಸಿ GP ಅಧಿಕಾರಿಗಳ ಬಳಿ ಪರಿಶೀಲಿಸಿ ಅವರಿಂದ ಮಂಜೂರು ಪಡೆದು
- ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು https://nrega.nic.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಧನ್ಯವಾದಗಳು..
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮಹಾತ್ಮ ಗಾಂಧಿ ನರೇಗಾ / MGNREGS) ಗ್ರಾಮೀಣ ಬಡವರ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಕೆಲಸವನ್ನು ಒದಗಿಸುವುದರ ಜೊತೆಗೆ, ದೀರ್ಘಕಾಲೀನ ಆಸ್ತಿ ನಿರ್ಮಾಣಕ್ಕೂ ಒತ್ತು ನೀಡಲಾಗುತ್ತದೆ. ಇಂತಹ ಆಸ್ತಿ ನಿರ್ಮಾಣ ಚಟುವಟಿಕೆಗಳಲ್ಲಿ ದನದ ಕೊಟ್ಟಿ (ಪಶುಶೆಡ್) ನಿರ್ಮಾಣಕ್ಕೆ ಸಹಾಯಧನವೂ ಒಂದು ಪ್ರಮುಖ ಅಂಶವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ರೈತರು ಮತ್ತು ಕೂಲಿ ಕಾರ್ಮಿಕರು ಪಶುಸಂಗೋಪನೆಯನ್ನೇ ಜೀವನೋಪಾಯದ ಮುಖ್ಯ ಮೂಲವಾಗಿ ಅವಲಂಬಿಸಿದ್ದಾರೆ. ಆದರೆ ಸೂಕ್ತ ಕೊಟ್ಟಿ ಇಲ್ಲದಿರುವುದರಿಂದ ಪಶುಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿ, ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಈ ಹಿನ್ನೆಲೆ ದನದ ಕೊಟ್ಟಿ ನಿರ್ಮಾಣಕ್ಕೆ ನರೇಗಾ ಯೋಜನೆಯ ಮೂಲಕ ಸಹಾಯ ನೀಡಲಾಗುತ್ತದೆ. ಈ ಸಹಾಯಧನದಿಂದ ರೈತರು ಮತ್ತು ಪಶುಸಂಗೋಪಕರು ವೈಜ್ಞಾನಿಕ ರೀತಿಯಲ್ಲಿ ಕೊಟ್ಟಿಯನ್ನು ನಿರ್ಮಿಸಿಕೊಳ್ಳಬಹುದು.
ದನದ ಕೊಟ್ಟಿ ನಿರ್ಮಾಣದಿಂದ ಪಶುಗಳಿಗೆ ಮಳೆ, ಬಿಸಿಲು ಮತ್ತು ಚಳಿ ಮುಂತಾದ ಹವಾಮಾನ ಅಡ್ಡಪರಿಣಾಮಗಳಿಂದ ರಕ್ಷಣೆ ದೊರೆಯುತ್ತದೆ. ಜೊತೆಗೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗುವುದರಿಂದ ಪಶು ರೋಗಗಳು ಕಡಿಮೆಯಾಗುತ್ತವೆ. ಆರೋಗ್ಯಕರ ಪಶುಗಳಿಂದ ಹಾಲು ಉತ್ಪಾದನೆ ಹೆಚ್ಚಾಗಿ, ಕುಟುಂಬದ ಆದಾಯದಲ್ಲಿ ವೃದ್ಧಿ ಕಂಡುಬರುತ್ತದೆ. ಇದರಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ನರೇಗಾ ಯೋಜನೆಯಡಿ ದನದ ಕೊಟ್ಟಿ ನಿರ್ಮಾಣ ಕಾರ್ಯದಲ್ಲಿ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ವಲಸೆ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಗ್ರಾಮೀಣ ಆರ್ಥಿಕತೆ ಬಲಪಡಿಸುತ್ತದೆ. ಮಹಿಳೆಯರು, ಸಣ್ಣ ಮತ್ತು ಅತಿಸಣ್ಣ ರೈತರು, अनुसೂಚಿತ ಜಾತಿ ಮತ್ತು ಜನಜಾತಿ ಕುಟುಂಬಗಳಿಗೆ ಈ ಸೌಲಭ್ಯ ವಿಶೇಷವಾಗಿ ಉಪಯುಕ್ತವಾಗಿದೆ.
ಒಟ್ಟಾರೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ದನದ ಕೊಟ್ಟಿಗೆ ನೀಡುವ ಸಹಾಯಧನವು ಉದ್ಯೋಗ ಸೃಷ್ಟಿ, ಪಶುಸಂಗೋಪನೆ ಉತ್ತೇಜನ ಮತ್ತು ಗ್ರಾಮೀಣ ಜೀವನಮಟ್ಟ ಸುಧಾರಣೆಗೆ ಮಹತ್ವದ ಪಾತ್ರವಹಿಸುತ್ತದೆ.