Home Guard recruitment: ರಾಜ್ಯ ಗೃಹರಕ್ಷಕ ದಳದ ನೇಮಕಾತಿಗೆ ಅಧಿಕೃತ ಪ್ರಕಟಣೆ, ರಾಜ್ಯ ಸರ್ಕಾರದಿಂದ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ ಇನ್ನು ಈಗಾಗಲೇ ಸರ್ಕಾರಿ ಹುದ್ದೆಯನ್ನು ಪಡೆಯಬೇಕು ಅಥವಾ ಸರ್ಕಾರಿ ಸೇವೆ ಮಾಡಬೇಕು ಎಂದು ಯೋಚಿಸುತ್ತಿರುವ ಯುವಕ ಯುವತಿಯರಿಗೆ ಮತ್ತೊಂದು ಅವಕಾಶ ಬಂದಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸಕ್ತಿ ಹೊಂದಿರುವಂತಹ ಯುವಕ ಯುವತಿಯರಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶಗಳು ಸ್ವಲ್ಪಮಟ್ಟಿನಲ್ಲಿ ಕಡಿಮೆ ಇದ್ದು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಗೃಹ ರಕ್ಷಕ ದಳದ ನೇಮಕಾತಿ ಪಡೆದು ಇದರಲ್ಲಿ ಸೇವೆ ಸಲ್ಲಿಸುವ ಮೂಲಕ ಪೊಲೀಸ್ ಇಲಾಖೆ ಸೇರಲು ಮೀಸಲಾತಿಯನ್ನು ಪಡೆಯಬಹುದಾಗಿದೆ ಇದರಿಂದ ಪೊಲೀಸ್ ಇಲಾಖೆ ಸೇರಬೇಕು ಎಂಬ ನಿಮ್ಮ ಕನಸು ಅತಿ ಬೇಗ ನನಸು ಆಗಲಿದೆ.
ಹೌದು ರಾಜ್ಯ ಸರ್ಕಾರದಿಂದ ಗೃಹರಕ್ಷಕ ದಳದ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ ಈ ಹುದ್ದೆಗಳಿಗೆ ಯುವಕ ಯುವತಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಪೊಲೀಸ್ ಇಲಾಖೆಯಲ್ಲಿ ಅಥವಾ ಸರ್ಕಾರಿಯ ಯಾವುದಾದರೂ ಒಂದು ಹುದ್ದೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ಗೃಹ ರಕ್ಷಕ ದಳದ ನೇಮಕಾತಿ ಪಡೆದು ಸೇವೆಯನ್ನು ಸಲ್ಲಿಸಬಹುದಾಗಿದೆ.
ಗೃಹರಕ್ಷಕ ದಳದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ.?
ರಾಜ್ಯದ ಶಿವಮೊಗ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಗೃಹರಕ್ಷಕ ದಳದ ಕೊರತೆ ಇದ್ದು ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಬರ್ತಿಗಾಗಿ ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ, ಅದರಲ್ಲೂ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು ಸೇವೆ ಸಲ್ಲಿಸುವ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂದು ಪ್ರಕಟಣೆ ನೀಡಲಾಗಿದೆ ಶಿವಮೊಗ್ಗ ಜಿಲ್ಲೆಯ ವಿವಿಧ ಘಟಕಗಳಾದ ಅಥವಾ ಪ್ರವಾಸಿ ತಾಣಗಳಾದ ಪ್ರದೇಶಗಳಲ್ಲಿ ಗೃಹರಕ್ಷಕ ದಳದ ಸಮಸ್ಯೆ ಇದ್ದು ಅವುಗಳ ಬರ್ತಿಗಾಗಿ ಸರ್ಕಾರವು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಆಸಕ್ತಿ ಹೊಂದಿದ್ದು ಗೃಹರಕ್ಷಕ ದಳಕ್ಕೆ ಸೇರಲು ಬಯಸುವವರಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗೃಹರಕ್ಷಕ ದಳದ ಅರ್ಹತಾ ಮಾನದಂಡಗಳು.
ಗೃಹರಕ್ಷಕ ದಳಕ್ಕೆ ಸೇರಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಅವುಗಳು ಏನೆಂದರೆ..
- ರಾಷ್ಟ್ರೀಯತೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು
- ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 19 ವರ್ಷ ಪೂರೈಸಿರಬೇಕು ಮತ್ತು 45 ವರ್ಷ ಮೀರಿರಬಾರದು
- ವಿದ್ಯಾರ್ಹತೆ: , ಕನಿಷ್ಠ 10ನೇ ತರಗತಿಯನ್ನು ಉತ್ತೀರ್ಣ ಆಗಿರುವಂತಹ ಅಭ್ಯರ್ಥಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
- ದೈಹಿಕ ಸಾಮರ್ಥ್ಯ: ಅರ್ಜಿ ಸಲ್ಲಿಸುವ ಅಭ್ಯರ್ಥಿ ವೈದ್ಯಕೀಯವಾಗಿ ಸದೃಢರಾಗಿರಬೇಕು
- ನಡತೆ: ಯಾವುದೇ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮುಖದ್ದಮೆಗಳು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ದಾಖಲೆ ಇರಬಾರದು
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ.?
ರಾಜ್ಯ ಸರ್ಕಾರದಿಂದ ನೇಮಕಾತಿ ಅಧಿಸೂಚನೆ ನೀಡಲಾಗಿರುವ ಗೃಹರಕ್ಷಕ ದಳದ ನೇಮಕಾತಿಗೆ ಈ ಮೇಲೆ ತಿಳಿಸಲಾದ ಎಲ್ಲಾ ಅರ್ಹತಾ ಮಾನದಂಡಗಳನ್ನು ಒಳಗೊಂಡಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಇನ್ನು ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಅರ್ಜಿ ನಮೂನೆಯನ್ನು ಶಿವಮೊಗ್ಗದ ಸಾಮಾನ್ಯೆಷ್ಟರ ಕಾರ್ಯಾಲಯ ಗೃಹರಕ್ಷಕ ದಳ ಅಥವಾ ಜಿಲ್ಲೆಯ ಆಯಾ ತಾಲೂಕು ಘಟಕ ಅಥವಾ ಉಪ ಘಟಕಗಳ ಕಚೇರಿಯಲ್ಲಿ ಪಡೆಯಬಹುದು.
- ಗೃಹರಕ್ಷಕ ದಳದ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 3 2026 ಕೊನೆಯ ದಿನಾಂಕ ಆಗಿರುತ್ತದೆ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು: 08182-295630 ಅಥವಾ 08182-255630 ನಂಬರಿಗೆ ಕರೆ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ
ಗೃಹರಕ್ಷಕ ದಳದ ನೇಮಕಾತಿಯ ಹೆಚ್ಚಿನ ಮಾಹಿತಿ ಮತ್ತು ಸಲಹೆ.
ರಾಜ್ಯ ಗೃಹರಕ್ಷಕ ದಳದ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಮೇಲೆ ನೀಡಲಾಗಿರುವ ಅರ್ಹತಾ ಮಾನದಂಡಗಳನ್ನು ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದು ಜೊತೆಗೆ ನೀವೇನಾದರೂ ಸರ್ಕಾರಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿದ್ದರೆ ಅಥವಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸನ್ನು ಹೊಂದಿದ್ದರೆ ಈ ಗೃಹರಕ್ಷಕ ದಳದ ನೇಮಕಾತಿ ನಿಮಗೆ ಅನುಕೂಲ ನೀಡಲಿದೆ ಸದ್ಯ ರಾಜ್ಯದ ಶಿವಮೊಗ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಮತ್ತು ಪ್ರವಾಸಿ ತಾಣಗಳಲ್ಲಿ ಖಾಲಿ ಇರುವ ಗ್ರಹ ರಕ್ಷಕ ದಳದ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ನೇಮಕಾತಿ ಪಡೆದು ಸೇವೆ ಸಲ್ಲಿಸಿದರೆ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕಾತಿಗಳು ಬಂದರೆ ಅದಕ್ಕೆ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಮೀಸಲಾತಿಯನ್ನು ನೀಡಲಾಗುತ್ತದೆ ಮತ್ತು ನಿಮ್ಮ ಸೇವೆಗೆ ಹೆಚ್ಚಿನ ಆದ್ಯತೆಯನ್ನು ಕೂಡ ನೀಡಲಾಗುತ್ತದೆ ಇದರಿಂದ ನೀವು ಗೃಹರಕ್ಷಕ ದಳದಿಂದ ನಿಮ್ಮ ಕನಸಿನ ಪೊಲೀಸ್ ಇಲಾಖೆಗೆ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.
ಹೌದು ನೀವೇನಾದರೂ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ಸೇರಬೇಕು ಎಂದು ಕನಸು ಕಟ್ಟಿದ್ದರೆ ಈ ಗೃಹ ರಕ್ಷಕ ದಳದ ನೇಮಕಾತಿಯು ಅನುಕೂಲ ಮಾಡಿಕೊಡಲಿದೆ ಹಾಗಾಗಿ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಇದೆ ಫೆಬ್ರವರಿ ಮೂರನೇ ದಿನಾಂಕ ಕೊನೆಯ ದಿನಾಂಕ ಆಗಿರುತ್ತದೆ ಕೇವಲ 10ನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು ನೀವು ಈ ಹುದ್ದೆಯನ್ನು ಪಡೆಯಬಹುದು ಹೆಚ್ಚಿನ ಮಾಹಿತಿಗೆ ಈ ಮೇಲೆ ನೀಡಲಾಗಿರುವ ಫೋನ್ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.
ಕರ್ನಾಟಕ ಹೋಮ್ ಗಾರ್ಡ್ಸ್ ಎಂದರೆ ಏನು?
ಕರ್ನಾಟಕ ಹೋಮ್ ಗಾರ್ಡ್ಸ್ ಎಂಬುದು ರಾಜ್ಯ ಸರ್ಕಾರದ ಅಧೀನದಲ್ಲಿರುವ ಸ್ವಯಂಸೇವಕ ಸಹಾಯಕ ಪಡೆ. ಇದನ್ನು ಕರ್ನಾಟಕ ಹೋಮ್ ಗಾರ್ಡ್ಸ್ ಅಧಿನಿಯಮ, 1962 ಅಡಿಯಲ್ಲಿ ಸ್ಥಾಪಿಸಲಾಗಿದೆ.
ಇವರು ಪೊಲೀಸ್ ಇಲಾಖೆ ಹಾಗೂ ನಾಗರಿಕ ಆಡಳಿತಕ್ಕೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.
ಹೋಮ್ ಗಾರ್ಡ್ಸ್ ಅವರ ಮುಖ್ಯ ಕರ್ತವ್ಯಗಳು
ಹೋಮ್ ಗಾರ್ಡ್ಸ್ರನ್ನು ಕೆಳಗಿನ ಕಾರ್ಯಗಳಿಗೆ ಬಳಸಲಾಗುತ್ತದೆ:
-
🚓 ಪೊಲೀಸ್ ಇಲಾಖೆಗೆ ಸಹಾಯ ಮಾಡುವುದು
-
🚦 ಸಂಚಾರ ನಿಯಂತ್ರಣ
-
👮 ಸಾರ್ವಜನಿಕ ಶಾಂತಿ ಮತ್ತು ಭದ್ರತೆ ಕಾಪಾಡುವುದು
-
🏛️ ಸರ್ಕಾರಿ ಕಟ್ಟಡಗಳು ಮತ್ತು ಮಹತ್ವದ ಸ್ಥಳಗಳ ಭದ್ರತೆ
-
🗳️ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ
-
🌊 ಪ್ರವಾಹ, ಅಗ್ನಿ ಅವಘಡ, ಪ್ರಕೃತಿ ವಿಕೋಪಗಳಲ್ಲಿ ರಕ್ಷಣಾ ಕಾರ್ಯ
-
🎉 ಸಾರ್ವಜನಿಕ ಕಾರ್ಯಕ್ರಮಗಳು, ಜಾತ್ರೆ, ಹಬ್ಬಗಳಲ್ಲಿ ಜನಸಂದಣಿ ನಿಯಂತ್ರಣ
ಆಡಳಿತ ಮತ್ತು ನಿಯಂತ್ರಣ
-
ಹೋಮ್ ಗಾರ್ಡ್ಸ್ ಇಲಾಖೆ ಗೃಹ ಇಲಾಖೆ (Home Department), ಕರ್ನಾಟಕ ಸರ್ಕಾರದ ಅಧೀನದಲ್ಲಿದೆ
-
ಜಿಲ್ಲೆ ಮಟ್ಟದಲ್ಲಿ ಕಮಾಂಡೆಂಟ್ / ಜಿಲ್ಲಾ ಕಮಾಂಡಂಟ್ ಅವರ ಮೂಲಕ ಕಾರ್ಯನಿರ್ವಹಣೆ
-
ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಣೆ
ನೇಮಕಾತಿ (Recruitment)
ಹೋಮ್ ಗಾರ್ಡ್ ಆಗಲು:
-
ಸ್ವಯಂಸೇವಕ ಮನೋಭಾವ ಇರಬೇಕು
-
ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬೇಕು
-
ಸರ್ಕಾರ ನಿಗದಿಪಡಿಸುವ ಅರ್ಹತೆಗಳನ್ನು ಪೂರೈಸಬೇಕು
-
ಆಯ್ಕೆಯ ನಂತರ ಮೂಲ ತರಬೇತಿ (Training) ನೀಡಲಾಗುತ್ತದೆ
👉 ನೇಮಕಾತಿ ಅಧಿಸೂಚನೆಗಳು ಜಿಲ್ಲಾವಾರು ಪ್ರಕಟವಾಗುತ್ತವೆ.
ವೇತನ / ಭತ್ಯೆ
-
ಹೋಮ್ ಗಾರ್ಡ್ಸ್ರು ಶಾಶ್ವತ ಸರ್ಕಾರಿ ನೌಕರರಲ್ಲ
-
ಕರ್ತವ್ಯಕ್ಕೆ ಹಾಜರಾದ ದಿನಗಳಿಗೆ ದೈನಂದಿನ ಭತ್ಯೆ (Daily Allowance) ನೀಡಲಾಗುತ್ತದೆ
-
ಈ ಭತ್ಯೆಯನ್ನು ಸರ್ಕಾರ ಕಾಲಕಾಲಕ್ಕೆ ಪರಿಷ್ಕರಿಸುತ್ತದೆ
ಪ್ರಮುಖ ವಿಷಯಗಳು
-
ಹೋಮ್ ಗಾರ್ಡ್ಸ್ರಿಗೆ ಪೂರ್ಣ ಪೊಲೀಸ್ ಅಧಿಕಾರ ಇರುವುದಿಲ್ಲ
-
ಇವರು ಪೊಲೀಸ್ ಪಡೆಗೆ ಸಹಾಯಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ
-
ಸಮಾಜ ಸೇವೆ ಮತ್ತು ಸಾರ್ವಜನಿಕ ಭದ್ರತೆ ಇವರ ಮುಖ್ಯ ಉದ್ದೇಶ