KSRTC recruitment: KSRTC ಡ್ರೈವರ್ ಹುದ್ದೆಗಳ ನೇಮಕಾತಿ 2026. KSRTC ಸಂಸ್ಥೆಯಲ್ಲಿ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿರುವಂತಹ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯು ಒಂದು ಉತ್ತಮ ಅವಕಾಶವಾಗಿದೆ ರಾಜ್ಯದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ನೀಡಲಾಗಿದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗಗಳಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳ ಬರ್ತಿಗಾಗಿ ಸಾರಿಗೆ ಸಂಸ್ಥೆಯಿಂದ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಹೇಳಿದ ಹಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸಕ್ತಿ ಅಥವಾ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಸಾರಿಗೆ ಸಂಸ್ಥೆಯಿಂದ ಸಿಹಿ ಸುದ್ದಿ ಸಿಕ್ಕಿದೆ ಅದೇನೆಂದರೆ 2026 ನೇ ಸಾಲಿನ ಮೊದಲ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಡಲಾಗುತ್ತಿದ್ದು KSRTC ಎಲ್ಲಿ ನೇಮಕಾತಿ ಪಡೆಯಬೇಕು ಅಥವಾ ಸೇವೆ ಸಲ್ಲಿಸಬೇಕು ಎಂಬ ಕನಸು ಕಟ್ಟಿರುವ ಅಭ್ಯರ್ಥಿಗಳ ಕನಸು ಇದೀಗ ನನಸಾಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಕಂಬವಾಗಿದ್ದು, ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಪಾತ್ರ ವಹಿಸಿದೆ. 1961ರಲ್ಲಿ ಸ್ಥಾಪನೆಯಾದ KSRTC, ಸುರಕ್ಷಿತ, ನಂಬಿಕಸ್ತ ಮತ್ತು ಕೈಗೆಟುಕುವ ಸಾರಿಗೆ ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇಂದು ಇದು ಕರ್ನಾಟಕದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ.
KSRTC ರಾಜ್ಯದ ಒಳಭಾಗದ ಜೊತೆಗೆ ಅಂತರರಾಜ್ಯ ಮಾರ್ಗಗಳಲ್ಲಿಯೂ ಸೇವೆ ನೀಡುತ್ತದೆ. ಸಾಮಾನ್ಯ ಬಸ್ಗಳು, ಎಕ್ಸ್ಪ್ರೆಸ್, ರಾಜಹಂಸ, ವೋಲ್ವೋ, ಅಂಬಾರಿ ಡ್ರೀಮ್ ಕ್ಲಾಸ್, ಏರ್ವಾಟಾವಾತ್ ಮುಂತಾದ ವಿವಿಧ ವರ್ಗದ ಬಸ್ಗಳನ್ನು ಪರಿಚಯಿಸಿ, ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಸೇವೆಗಳನ್ನು ವಿಸ್ತರಿಸಿದೆ. ಈ ವೈವಿಧ್ಯಮಯ ಸೇವೆಗಳ ಮೂಲಕ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ KSRTC ಬಸ್ಗಳು ಜನಜೀವನದ ಅವಿಭಾಜ್ಯ ಅಂಗವಾಗಿವೆ. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ನಗರಗಳಿಗೆ ಪ್ರಯಾಣಿಸುವ ಅನೇಕ ಜನರಿಗೆ ಇದು ಜೀವನಾಡಿಯಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ವಿಶೇಷ ರಿಯಾಯಿತಿಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಉತ್ತೇಜಿಸುತ್ತದೆ.
ಸುರಕ್ಷತೆ ಮತ್ತು ಸಮಯಪಾಲನೆ KSRTCಯ ಪ್ರಮುಖ ಆದ್ಯತೆಗಳಾಗಿವೆ. ತರಬೇತಿ ಪಡೆದ ಚಾಲಕರು, ನಿಯಮಿತ ವಾಹನ ನಿರ್ವಹಣೆ ಹಾಗೂ ತಂತ್ರಜ್ಞಾನ ಆಧಾರಿತ ಟಿಕೆಟ್ ವ್ಯವಸ್ಥೆ ಪ್ರಯಾಣಿಕರ ವಿಶ್ವಾಸವನ್ನು ಹೆಚ್ಚಿಸಿದೆ. ಇತ್ತೀಚೆಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಡಿಜಿಟಲ್ ಯುಗಕ್ಕೆ ತಕ್ಕಂತೆ ಸೇವೆಗಳನ್ನು ಆಧುನೀಕರಿಸಿದೆ.
ಒಟ್ಟಾರೆ, KSRTC ಕೇವಲ ಸಾರಿಗೆ ಸಂಸ್ಥೆಯಲ್ಲ; ಇದು ಕರ್ನಾಟಕದ ಅಭಿವೃದ್ಧಿಯ ಚಕ್ರವನ್ನು ಮುಂದೂಡುವ ಶಕ್ತಿ. ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಸೇವೆಗಳ ಮೂಲಕ KSRTC ಮುಂದಿನ ದಿನಗಳಲ್ಲಿಯೂ ರಾಜ್ಯದ ಹೆಮ್ಮೆಯ ಸಂಸ್ಥೆಯಾಗಿ ಉಳಿಯಲಿದೆ.
KSRTC ಹುದ್ದೆಯ ವಿವರ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿದೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು ಬೀದರ್ ವಿಭಾಗದ ವ್ಯಾಪ್ತಿಗೆ ಒಳಪಡುವ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಅಧಿಸೂಚನೆಯನ್ನು ನೀಡಲಾಗಿದೆ ಈ ನೇಮಕಾತಿಯಲ್ಲಿ ಚಾಲಕರು ಬೇಕಾಗಿದ್ದು ಸಾರಿಗೆ ಸಂಸ್ಥೆಯಿಂದ ಚಾಲಕ ಹುದ್ದೆಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಬಸ್ ಚಾಲನೆಗೆ ಅನುಭವ ಹೊಂದಿರುವ ಹಾಗೂ ಅಗತ್ಯ ಅರ್ಹತೆಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗಿದೆ.
ಹುದ್ದೆಯ ಸಂಖ್ಯೆ ಮತ್ತು ಕರ್ತವ್ಯದ ಸ್ಥಳ.
KSRTC ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನೇಮಕಾತಿ ನಡೆಯಲಿದ್ದು ಈ ನೇಮಕಾತಿಯಲ್ಲಿ ಒಟ್ಟು 78 ಹುದ್ದೆಗಳು ಖಾಲಿ ಇತ್ತು, ಈ ಹುದ್ದೆಗಳ ಬರ್ತಿಗಾಗಿ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ ಇನ್ನು ಎಲ್ಲಾ ಹುದ್ದೆಗಳು ಚಾಲಕ ಹುದ್ದೆಗಳೆ ಆಗಿದ್ದು ಅನುಭವ ಮತ್ತು ಅಗತ್ಯ ಅರ್ಹತೆಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನು ಚಾಲಕ ಹುದ್ದೆಯ ಅಗತ್ಯ ಬೀದರ್ ವಿಭಾಗದ ಘಟಕಗಳಿಗೆ ಆಗಿದ್ದು ಬೀದರ್ನಲ್ಲಿ ಕರ್ತವ್ಯವನ್ನು ಸಲ್ಲಿಸಬೇಕಾಗುತ್ತದೆ.
ಶೈಕ್ಷಣಿಕ ಹಾಗೂ ತಾಂತ್ರಿಕ ಅರ್ಹತೆ.
KSRTC ಅಲ್ಲಿ ಖಾಲಿ ಇರುವ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಲವು ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಅವುಗಳೆಂದರೆ.
- ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು
- ಬಾರಿ ಪ್ರಮಾಣದ ವಾಹನ ಅಥವಾ ಸರಕು ವಾಹನವನ್ನು ಚಾಲನೆ ಮಾಡುವ ಕನಿಷ್ಠ ಎರಡು ವರ್ಷಗಳ ಲೈಸೆನ್ಸ್ ಹೊಂದಿರಬೇಕು
- ಕರ್ನಾಟಕ ರಾಜ್ಯ ಬ್ಯಾಟ್ಸ್ ಹೊಂದಿರುವುದು ಕಡ್ಡಾಯ
- ಅದೇ ರೀತಿ ಬಾರಿ ಪ್ರಮಾಣದ ವಾಹನ ಅಥವಾ ಲಘು ವಾಹನ ಚಾಲನೆ ಮಾಡಿದ ಅನುಭವ ಹೊಂದಿರಬೇಕು
ವಯೋಮಿತಿ ಮತ್ತು ಆಯ್ಕೆ ವಿಧಾನ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2026ರ ವೇಳೆಗೆ ಕನಿಷ್ಠ 24 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ವರ್ಗಾನುಸಾರವಾಗಿ ನಿಗದಿಪಡಿಸಲಾಗಿದೆ
- ಸಾಮಾನ್ಯ ವರ್ಗ ಗರಿಷ್ಠ 35 ವರ್ಷ
- ಪ್ರವರ್ಗ 2A,2B, 3A, 3B ಗರಿಷ್ಠ 38 ವರ್ಷ
- SC ಮತ್ತು ST ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
ಇನ್ನು ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಅಭ್ಯರ್ಥಿಗಳು
- ವಾಹನ ಚಾಲನ ಅನುಭವ
- ಲೈಸೆನ್ಸ್ ಮತ್ತು ದಾಖಲೆಗಳ ಮಾನ್ಯತೆ
- ಶಿಸ್ತು ಜವಾಬ್ದಾರಿ ಮತ್ತು ಸಂವಹನ ಸಾಮರ್ಥ್ಯ ಆದರದ ಮೇಲೆ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ.
ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಆದ ಕಾರಣ ಅಭ್ಯರ್ಥಿಗಳಿಗೆ ಯಾವುದೇ ಆನ್ಲೈನ್ ಅರ್ಜಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುವುದಿಲ್ಲ ಗೊತ್ತಾಗಿ ಸಂದರ್ಶನಕ್ಕೆ ಹಾಜರಾಗಬೇಕು
- ಮೊದಲು ಸಂದರ್ಶನಕ್ಕೆ ಹಾಜರಾಗುವ ಬದಲು ಇಲಾಖೆಯಿಂದ ಪ್ರಕಟಿಸಲಾದ ಅದಿ ಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು
- ಇನ್ನು ಸಂದರ್ಶನ ನಡೆಯುವ ದಿನದಂದು ಅಭ್ಯರ್ಥಿಗಳು ಮಧ್ಯಾಹ್ನ 12 ಗಂಟೆಯೊಳಗೆ ಕಚೇರಿಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು
- ಅಭ್ಯರ್ಥಿ ಕೆಳಗಿನ ದಾಖಲೆಗಳೊಂದಿಗೆ ಕಡ್ಡಾಯವಾಗಿ ಸಂದರ್ಶನಕ್ಕೆ ಹಾಜರಾಗಬೇಕು
- ಚಾಲನ ಪರವಾನಿಗೆ ಸಂಬಂಧ ಪಟ್ಟ ಮೂಲ ದಾಖಲೆಗಳು ಮತ್ತು ಇನ್ನಿತರ ಜೆರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ ದಿನದ ಭಾವಚಿತ್ರ ದೊಂದಿಗೆ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಳೆ ಬಸ್ ನಿಲ್ದಾಣದ ಬಳಿ ಬೀದರ್ ವಿಭಾಗೀಯ ಕಚೇರಿಗೆ ಫೆಬ್ರವರಿ 3 2026 ನೇ ದಿನಾಂಕದಂದು ಭೇಟಿ ನೀಡಬೇಕಾಗಿ ಸೂಚಕ ನೀಡಲಾಗಿದೆ ಧನ್ಯವಾದಗಳು..