BPL ration card: ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವಂತಹ ಅಭ್ಯರ್ಥಿಗಳಿಗೆ ಇದೀಗ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ ಹೌದು ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಜಯಶೀಲರಾಗಿ ಅಧಿಕಾರವನ್ನು ಪಡೆಯುತ್ತದೆ ನಂತರದ ಕೆಲವು ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಚುನಾವಣೆ ಸಮಯದಲ್ಲಿ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಯನ್ನು ಮಾಡಲಾಗುತ್ತದೆ ಅದೇ ರೀತಿ ರಾಜ್ಯದ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೂಡ ನೀಡಲಾಗುತ್ತದೆ ನಂತರ ಸರ್ಕಾರದಿಂದ ಅಕ್ರಮ ರೇಷನ್ ಕಾರ್ಡ್ ಪಡೆದಿರುವಂತಹ ಕಾಡುಗಳನ್ನು ರದ್ದು ಮಾಡಲು ಕೂಡ ಮುಂದಾಗುತ್ತದೆ ಅದಾದ ನಂತರ ಕಳೆದ ಎರಡು ವರ್ಷಗಳಿಂದ ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ಅರ್ಜಿಗೆ ಅವಕಾಶ ನೀಡದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಅವಕಾಶವನ್ನು ನೀಡಿದೆ.
ಈಗಾಗಲೇ ಹೇಳಿದ ಹಾಗೆ ರಾಜ್ಯ ಸರ್ಕಾರದಿಂದ ಅಕ್ರಮ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಅಥವಾ ಅಂತಹ ಕಾರ್ಡ್ ಗಳನ್ನು ತೆಗೆದು ಹಾಕಲು ಸರ್ಕಾರದಿಂದ kyc ಮಾಡಿಸುವುದು ಕಡ್ಡಾಯ ಎಂದು ಸೂಚನೆ ನೀಡಿ kyc ಆಗದ ಕಾರ್ಡ್ಗಳನ್ನು ಅಂತಹ ಹಂತವಾಗಿ ತೆಗೆದು ಹಾಕಿದ್ದು ಇದೀಗ ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅಂದರೆ ಹೊಸ ಹೆಸರುಗಳ ಸೇರ್ಪಡೆ ಅಥವಾ ಹೆಸರನ್ನು ಕಾರ್ಡ್ ನಿಂದ ತೆಗೆದುಹಾಕಲು ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಕೂಡ ಸಲ್ಲಿಸಲು ಮತ್ತೊಂದು ಅವಕಾಶವನ್ನು ನೀಡಿದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಆರಂಭ.
ನಮ್ಮ ಭಾರತ ದೇಶದಲ್ಲಿ ಬಡವರಿಗಾಗಿ ಮತ್ತು ಕೂಲಿ ಕಾರ್ಮಿಕರಿಗಾಗಿ ರೇಷನ್ ಕಾರ್ಡ್ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಕಾರ್ಡ್ ಮೂಲಕ ಕೆಲವು ಸೌಲಭ್ಯಗಳನ್ನು ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ನೀಡಲಾಗುತ್ತಿದ್ದು ಜೊತೆಗೆ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಕ್ಕೆ ಪ್ರತಿ ತಿಂಗಳು ಪಡಿತರ ಕೂಡ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ ಸದ್ಯ ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ ಜೊತೆಗೆ ಕೇಂದ್ರ ಸರ್ಕಾರದಿಂದ ಕೂಡ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಕ್ಕೆ ಹೊಸ ಹೊಸ ಯೋಜನೆಯಗಳ ಮೂಲಕ ಕೆಲವು ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡಲಾಗುತ್ತಿದೆ ಆದರೆ ರೇಷನ್ ಕಾರ್ಡ್ ಗಳನ್ನು ಕೆಲವರು ಅಕ್ರಮವಾಗಿ ಪಡೆದು ರೇಷನ್ ಕಾರ್ಡ್ ನ ಸೌಲಭ್ಯಗಳು ಅಥವಾ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಹಾಗಾಗಿ ರಾಜ್ಯ ಸರ್ಕಾರದಿಂದ ಅಂತಹ ಕಾರ್ಡ್ಗಳನ್ನು ತೆಗೆದುಹಾಕುವ ಉದ್ದೇಶದಿಂದ kyc ಮಾಡಿಸುವುದು ಕಡ್ಡಾಯ ಎಂದು ಸೂಚನೆ ನೀಡಿದ್ದು kyc ಆಗದ ಕಾರ್ಡ್ಗಳನ್ನು ಸರ್ಕಾರದಿಂದ ತೆಗೆದು ಹಾಕಲಾಗಿದೆ.
ಯಾರೆಲ್ಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.
ರಾಜ್ಯ ಆಹಾರ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ಇದೀಗ ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಮಾನ್ಯ ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಪಡೆಯಲು ಬಯಸುವ ಅರ್ಜಿದಾರರು ತುರ್ತು ಪರಿಸ್ಥಿತಿಗೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ರೇಷನ್ ಕಾರ್ಡ್ ಬೇಕಾದರೆ ಅರ್ಜಿ ಸಲ್ಲಿಸಬಹುದು ಜೊತೆಗೆ ನಿಮ್ಮ ಹತ್ತಿರ ಈ ಸ್ಟ್ರಮ್ ಕಾರ್ಡ್ ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುತ್ತೀರಿ. ಹೌದು ಈ ಶ್ರಮ ಕಾರ್ಡ್ ಕೇವಲ ರೇಷನ್ ಕಾರ್ಡ್ ಪಡೆಯಲು ಮಾತ್ರವಲ್ಲದೆ ಕುಟುಂಬದ ಸದಸ್ಯರಿಗೆ ತುರ್ತು ಆರೋಗ್ಯದ ಸಮಸ್ಯೆ ಇದ್ದರೂ ಈ ಕಾರ್ಡ್ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರದಿಂದ ಕೂಲಿ ಕಾರ್ಮಿಕರಿಗೆ ಮತ್ತು ಬಡವರಿಗೆ ಈ ಶ್ರಮ ಕಾರ್ಡ್ ನೀಡಲಾಗಿದೆ ಹಾಗಾಗಿ ಅಂಥವರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಹಾಗಾಗಿ ನೀವೇನಾದರೂ ರೇಷನ್ ಕಾರ್ಡಿಗೆ ಹೊಸ ಅರ್ಜಿ ಸಲ್ಲಿಸಲು ಕಾಯುತ್ತಿದ್ದರೆ ನಿಮ್ಮ ಬಳಿ ಕಡ್ಡಾಯವಾಗಿ ಈ ಶ್ರಮ ಕಾರ್ಡ್ ಇರಬೇಕಾಗುತ್ತದೆ ಅಥವಾ ಇಲ್ಲದಿದ್ದರೆ ಹತ್ತಿರದ ಗ್ರಾಮವನ್ನು ಕೇಂದ್ರಕ್ಕೆ ಭೇಟಿ ನೀಡಿ ಈಗಲೇ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಿ ನಂತರ ನೀವು ರಾಜ್ಯ ಸರ್ಕಾರದಿಂದ ಇದೆ ಫೆಬ್ರವರಿ ತಿಂಗಳನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಸಮಯದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ.?
ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಆಹಾರ ಇಲಾಖೆಯಿಂದ ರಾಜ್ಯದ ಜನರಿಗೆ ಅಥವಾ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವಂತಹ ಅಭ್ಯರ್ಥಿಗಳಿಗೆ ಸರ್ಕಾರದಿಂದ ಮತ್ತೊಂದು ಅವಕಾಶವನ್ನು ನೀಡಲಿದ್ದು ಈ ಬಾರಿ ಅರ್ಜಿ ಸಲ್ಲಿಸಲು ಸರ್ಕಾರ ಈ ಶ್ರಮ ಕಾರ್ಡ್ ಕಡ್ಡಾಯ ಎಂದು ತಿಳಿಸಿದೆ ಈ ಕಾರ್ಡ್ ಹೊಂದಿದಂತಹ ಅಭ್ಯರ್ಥಿಗಳು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮವನ್ ಅಥವಾ ಕರ್ನಾಟಕ 1 ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಇನ್ನು ಅರ್ಜಿ ಸಲ್ಲಿಸಲು ನಿಮಗೆ ಮಾರ್ಚ್ 31 ಕೊನೆಯ ದಿನಾಂಕ ಆಗಿರುತ್ತದೆ ಎಂದು ಸೂಚನೆ ಕೂಡ ನೀಡಲಾಗಿದೆ ಹಾಗಾಗಿ ಅರ್ಜಿ ಸಲ್ಲಿಸಲು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.karnataka.gov.in
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.
ರಾಜ್ಯ ಸರ್ಕಾರದಿಂದ ನೀಡಲಾಗಿರುವ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಕೆಲವು ಮುಖ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಅವುಗಳೆಂದರೆ..
- ಈ ಶ್ರಮ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
- ವಿಳಾಸದ ದಾಖಲಾತಿಗಳು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ ಇದು ಮಕ್ಕಳಿಗೆ ಮಾತ್ರ ಅನ್ವಯ
ಈ ಎಲ್ಲಾ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನು ಈಗಾಗಲೇ ತಿಳಿಸಿದ ಹಾಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿಗೆ ಫೆಬ್ರವರಿ ತಿಂಗಳಿನಿಂದ ಮಾರ್ಚ್ 31ನೇ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವಂತಹ ಅರ್ಜಿದಾರರು ಈ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ, https://ahara.karnataka.gov.in ಧನ್ಯವಾದಗಳು..
BPL ರೇಷನ್ ಕಾರ್ಡ್.
BPL (Below Poverty Line) ರೇಷನ್ ಕಾರ್ಡ್ ಎಂಬುದು ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾಗುವ ಮಹತ್ವದ ಗುರುತಿನ ಚೀಟಿ. ಈ ಕಾರ್ಡ್ ಮೂಲಕ ಆರ್ಥಿಕವಾಗಿ ದುರ್ಬಲರಾದ ಜನರಿಗೆ ಆಹಾರ ಭದ್ರತೆ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಬಡತನ ಇನ್ನೂ ದೊಡ್ಡ ಸಮಸ್ಯೆಯಾಗಿರುವುದರಿಂದ, BPL ರೇಷನ್ ಕಾರ್ಡ್ ಬಡ ಜನರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಕಡಿಮೆ ದರದಲ್ಲಿ ಅಕ್ಕಿ, ಗೋಧಿ, ಸಕ್ಕರೆ, ಎಣ್ಣೆ ಮೊದಲಾದ ಅಗತ್ಯ ಆಹಾರ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಪಡೆಯುವ ಅವಕಾಶ ದೊರೆಯುತ್ತದೆ. ಇದರಿಂದ ಬಡ ಕುಟುಂಬಗಳು ಪೋಷಣೆಯ ಕೊರತೆಯನ್ನು ತಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಮತ್ತು ನಗರ ಬಡವಾಡಗಳಲ್ಲಿ ಈ ಕಾರ್ಡ್ ಅನೇಕ ಜನರಿಗೆ ಜೀವಾಳವಾಗಿದೆ.
ಆಹಾರ ಸೌಲಭ್ಯಗಳ ಜೊತೆಗೆ, BPL ರೇಷನ್ ಕಾರ್ಡ್ ಅನ್ನು ಗುರುತಿನ ದಾಖಲೆ ರೂಪದಲ್ಲಿಯೂ ಬಳಸಲಾಗುತ್ತದೆ. ಅನೇಕ ಸರ್ಕಾರಿ ಯೋಜನೆಗಳು, ಉದಾಹರಣೆಗೆ ವಸತಿ ಯೋಜನೆ, ಉಚಿತ ಅಥವಾ ರಿಯಾಯಿತಿ ಆರೋಗ್ಯ ಸೇವೆಗಳು, ವಿದ್ಯಾರ್ಥಿವೇತನ, ಉಚಿತ ವಿದ್ಯುತ್ ಅಥವಾ ನೀರು ಸಂಪರ್ಕ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಾಗ BPL ಕಾರ್ಡ್ ಪ್ರಮುಖ ದಾಖಲೆ ಆಗಿರುತ್ತದೆ. ಹೀಗಾಗಿ ಇದು ಬಡ ಜನರನ್ನು ಸಮಾಜದ ಮುಖ್ಯಧಾರೆಯತ್ತ ತರುವ ಸಾಧನವಾಗಿದೆ.
BPL ರೇಷನ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿದ ಆದಾಯ ಮಾನದಂಡಗಳು ಮತ್ತು ಸಾಮಾಜಿಕ–ಆರ್ಥಿಕ ಅಂಶಗಳನ್ನು ಪರಿಗಣಿಸಲಾಗುತ್ತದೆ. ಅರ್ಹ ಕುಟುಂಬಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತದೆ. ಆದರೆ ಕೆಲವೊಮ್ಮೆ ಅರ್ಹರಲ್ಲದವರು ಕಾರ್ಡ್ ಪಡೆಯುವುದು ಅಥವಾ ಅರ್ಹರಿಗೆ ಕಾರ್ಡ್ ಸಿಗದಿರುವ ಸಮಸ್ಯೆಗಳು ಕೂಡ ಕಂಡುಬರುತ್ತವೆ. ಆದ್ದರಿಂದ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಮಾಡುವ ಅಗತ್ಯವಿದೆ.
ಒಟ್ಟಾರೆ, BPL ರೇಷನ್ ಕಾರ್ಡ್ ಬಡತನ ನಿವಾರಣೆಯ ದಿಕ್ಕಿನಲ್ಲಿ ಸರ್ಕಾರ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ. ಇದು ಬಡ ಕುಟುಂಬಗಳಿಗೆ ಆಹಾರ ಭದ್ರತೆ, ಸಾಮಾಜಿಕ ರಕ್ಷಣೆ ಮತ್ತು ಉತ್ತಮ ಜೀವನದ ಭರವಸೆಯನ್ನು ನೀಡುತ್ತದೆ.