Sukanya samruddhi yojana: ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 70 ಲಕ್ಷ ಸಹಾಯಧನ.!
ಸುಕನ್ಯಾ ಸಮೃದ್ಧಿ ಯೋಜನೆ – ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರತೆ
ಭಾರತ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶದಿಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದ ಭಾಗವಾಗಿದ್ದು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಯಾವುದೇ ಮಾನ್ಯತೆ ಪಡೆದ ಬ್ಯಾಂಕ್‌ಗಳಲ್ಲಿ ತೆರೆಯಲು ಅವಕಾಶವಿದೆ. ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯಡಿ ಖಾತೆ ತೆರೆಯಬಹುದು. ವಿಶೇಷ ಸಂದರ್ಭಗಳಲ್ಲಿ ಜೋಡಿ ಮಕ್ಕಳಿಗೆ ವಿನಾಯಿತಿ ನೀಡಲಾಗುತ್ತದೆ.
ಈ ಯೋಜನೆಯ ಮುಖ್ಯ ವೈಶಿಷ್ಟ್ಯವೆಂದರೆ ಹೆಚ್ಚಿನ ಬಡ್ಡಿದರ. ಸರ್ಕಾರ ಪ್ರತಿ ವರ್ಷ ಬಡ್ಡಿದರವನ್ನು ನಿಗದಿಪಡಿಸುತ್ತದೆ ಮತ್ತು ಇದು ಇತರೆ ಉಳಿತಾಯ ಯೋಜನೆಗಳಿಗಿಂತ ಹೆಚ್ಚು ಲಾಭದಾಯಕವಾಗಿದೆ. ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ ರೂ.250 ಮತ್ತು ಗರಿಷ್ಠ ರೂ.1.5 ಲಕ್ಷವರೆಗೆ ಹಣವನ್ನು ಜಮಾ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಲಭ್ಯವಿದೆ.
ಸುಕನ್ಯಾ ಸಮೃದ್ಧಿ ಖಾತೆಯ ಅವಧಿ 21 ವರ್ಷಗಳಾಗಿದ್ದು, ಹೆಣ್ಣು ಮಗುವಿನ 18ನೇ ವಯಸ್ಸಿನ ನಂತರ ಶಿಕ್ಷಣಕ್ಕಾಗಿ ಭಾಗಶಃ ಹಣವನ್ನು ತೆಗೆಯಬಹುದು. ಮಗು 21 ವರ್ಷ ತುಂಬಿದ ನಂತರ ಅಥವಾ ವಿವಾಹದ ಸಮಯದಲ್ಲಿ ಸಂಪೂರ್ಣ ಮೊತ್ತವನ್ನು ತೆಗೆಯುವ ಅವಕಾಶವಿದೆ.
ಒಟ್ಟಾರೆ, ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಇದು ಪೋಷಕರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸುವುದರ ಜೊತೆಗೆ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆತ್ಮನಿರ್ಭರ ಬದುಕಿಗೆ ಬಲವಾದ ಆಧಾರವನ್ನು ಒದಗಿಸುತ್ತದೆ. ಸರ್ಕಾರದ ಈ ಯೋಜನೆ ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು.
ಈಗಾಗಲೇ ತಿಳಿಸಿದ ಹಾಗೆ 10 ವರ್ಷದ ಒಳಗಿನ ಹೆಣ್ಣುಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ ಭಾರತ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದ್ದು ಈ ಯೋಜನೆಯಲ್ಲಿ ಪ್ರತಿವರ್ಷಕ್ಕೆ ಕನಿಷ್ಠ 250ಗಳಿಂದ ಆರಂಭಿಸಿ ಗರಿಷ್ಠ 1.5 ಲಕ್ಷದ ವರೆಗೆ ಹಣವನ್ನು ಜಮಾ ಮಾಡಬಹುದು. ಇನ್ನು ಈ ಯೋಜನೆಯಲ್ಲಿ ಒಂದು ಕುಟುಂಬದ ಗರಿಷ್ಠ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಅನುಮತಿ ಇದೆ ಜೊತೆಗೆ ಅವಳಿ ಮಕ್ಕಳು ಇದ್ದ ಸಂದರ್ಭದಲ್ಲಿ ಅಂತಹ ಹೆಣ್ಣು ಮಕ್ಕಳಿಗೆ ವಿನಾಯಿತಿ ನೀಡಲಾಗುತ್ತದೆ ಇನ್ನು ಈ ಯೋಜನೆಯ ಖಾತೆಯನ್ನು ಮಕ್ಕಳ ಪೋಷಕರು ಅಥವಾ ಕಾನೂನು ಪಾಲಕರು ಮಾತ್ರ ತೆರೆಯಬಹುದಾಗಿದೆ.
- ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವ ಸದಸ್ಯರು ಕಡ್ಡಾಯವಾಗಿ ಭಾರತೀಯ ನಿವಾಸಿ ಆಗಿರಬೇಕು
ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?
ಈಗಾಗಲೇ ಹೇಳಿದ ಹಾಗೆ ಈ ಯೋಜನೆಗೆ 10 ವರ್ಷದ ಒಳಗಿನ ಹೆಣ್ಣು ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಯೋಜನೆಯಲ್ಲಿ ಕನಿಷ್ಠ 250ಗಳಿಂದ ಗರಿಷ್ಠ 1.5 ಲಕ್ಷಗಳ ವರೆಗೆ ಪ್ರತಿ ತಿಂಗಳು ಹಣ ಜಮಾ ಮಾಡಬಹುದಾಗಿದೆ ಈ ಯೋಜನೆಯ ಹಣವು ಹೆಣ್ಣು ಮಗುವಿನ 18 ವರ್ಷ ತುಂಬಿದ ನಂತರದಲ್ಲಿ ಖಾತೆಯನ್ನು ನಿರ್ವಹಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಥವಾ ಖಾತೆ ತೆರೆಯಲು ಹತ್ತಿರದ ಅಂಚೆ ಕಚೇರಿಗೆ ಅಥವಾ ನಿರ್ದಿಷ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಖಾತೆ ತೆರೆಯಲು ಅರ್ಜಿ ಸಲ್ಲಿಸಿ. ಖಾತೆ ತೆರೆದ ನಂತರ ಆನ್ಲೈನ್ ಮೂಲಕ ಹಣ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಅನ್ನು ಹೊಂದಿಸಬಹುದು IPPB ಅಪ್ಲಿಕೇಶನ್ ಮೂಲಕ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು
ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು.
ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
- ಹೆಣ್ಣು ಮಗುವಿನ ಜನ್ಮ ಪ್ರಮಾಣ ಪತ್ರ
- ಪೋಷಕರ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ
- ಪೋಷಕರ ಪ್ಯಾನ್ ಕಾರ್ಡ್
- ನಿವಾಸ ದೃಢೀಕರಣ ಪತ್ರ
- ಪೋಷಕರ ಮತ್ತು ಮಗುವಿನ ವೈದ್ಯಕೀಯ ಪ್ರಮಾಣ ಪತ್ರ
- ಪೋಷಕರ ಫೋಟೋಗಳು ಮತ್ತು ಇತರ ದಾಖಲೆಗಳು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೇಲ್ಕಂಡ ದಾಖಲೆಗಳೊಂದಿಗೆ ಹತ್ತಿರದ ಅಂಚೆ ಕಚೇರಿಗೆ ಅಥವಾ ನಿರ್ದಿಷ್ಟ ಬ್ಯಾಂಕ್ ಶಾಖೆಗೆ ಬೇಟಿ ನೀಡಿ ನೂರು ರೂಪಾಯಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಅಥವಾ ಖಾತೆಯನ್ನು ತೆರೆಯಬಹುದಾಗಿದೆ.
ಹೂಡಿಕೆಯ ಮಿತಿಗಳು ಮತ್ತು ಅವಧಿ.?
ಈ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷಗಳವರೆಗೆ ಹಣವನ್ನು ಖಾತೆಗೆ ಜಮಾ ಮಾಡಬಹುದಾಗಿದೆ ಈ ಹೂಡಿಕೆ ಅನ್ನು 15 ವರ್ಷಗಳ ವರೆಗೆ ಹೂಡಿಕೆ ಮಾಡಿ ನಂತರ 21 ವರ್ಷಗಳ ನಂತರ ಯೋಜನೆ ಮೆಚುರಿಟಿಯನ್ನು ಹೊಂದುತ್ತದೆ.
, ಸುಕನ್ಯ ಸಮೃದ್ಧಿ ಯೋಜನೆಯ ಮೆಚುರಿಟಿ ಮೊತ್ತದ ಅಂದಾಜು.?
ಈಗಾಗಲೇ ಹೇಳಿದ ಹಾಗೆ ಈ ಯೋಜನೆಯಲ್ಲಿ 15 ವರ್ಷಗಳ ವರೆಗೆ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ ನಂತರ ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರದಲ್ಲಿ ಈ ಖಾತೆಯು ಮೆಚುರಿಟಿ ಹೊಂದುತ್ತದೆ ನಂತರ ಯೋಜನೆಯ ಗರಿಷ್ಠ ಒಂದುವರೆ ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದ್ದಲ್ಲಿ 70ಲಕ್ಷ ರೂಪಾಯಿ ಸಹಾಯಧನ ಮೊತ್ತ ಸಿಗಲಿದೆ ಈ ರೀತಿ ನೀವು ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ವರ್ಷವೂ ಶೇಕಡ 8.2% ನಷ್ಟು ಬಡ್ಡಿ ದರದಂತೆ ಹಣಕ್ಕೆ ಆದಾಯ ಬರಲಿದೆ ಈಗಲೇ ಹತ್ತಿರದ ಅಂಚೆ ಕಚೇರಿಗೆ ಅಥವಾ ನಿರ್ದಿಷ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ ಖಾತೆಯನ್ನು ತೆರೆಯಬಹುದಾಗಿದೆ ಧನ್ಯವಾದಗಳು..