Telegram Join My Telegram WhatsApp Join My WhatsApp

BSNL sim card: BSNL ಗ್ರಾಹಕರಿಗೆ ಸಿಹಿ ಸುದ್ದಿ. ಉಚಿತ ಸಿಮ್ ಕಾರ್ಡ್ ಜೊತೆಗೆ ವಿಶೇಷ ಆಫರ್ ನೀಡಿದ BSNL.?

 

BSNL sim card: BSNL ಗ್ರಾಹಕರಿಗೆ ಸಿಹಿ ಸುದ್ದಿ. ಉಚಿತ ಸಿಮ್ ಕಾರ್ಡ್ ಜೊತೆಗೆ ವಿಶೇಷ ಆಫರ್ ನೀಡಿದ BSNL.?

 ಎಲ್ಲರಿಗೂ ನಮಸ್ಕಾರ.. ಭಾರತ ಸರ್ಕಾರದ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆಯಾದ  BSNL  ಭರತ್ ಸಂಚಾರ ನಿಗಮ್ ಲಿಮಿಟೆಡ್ ಮತ್ತೊಮ್ಮೆ ಟೆಲಿಕಾಂ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ ಏಕೆಂದರೆ ದೇಶಾದ್ಯಂತ ಗ್ರಾಹಕರಿಗೆ ಉಚಿತ ಸಿಮ್ ಕಾರ್ಡ್ ಗಳನ್ನು ವಿತರಿಸುವ ಮಹತ್ವದ ಘೋಷಣೆಯನ್ನು ಕಂಪನಿ ಮಾಡಿದೆ ಜೊತೆಗೆ ಇದು ಲಕ್ಷಾಂತರ ಬಳಕೆದಾರರಿಗೆ ನೇರ ಲಾಭ ನೀಡುವ ನಿರೀಕ್ಷೆಯನ್ನು  ಹೊಂದಿದೆ. ಹೌದು BSNL  ಈ ಮೊದಲು ದೇಶದ ಮೊದಲ ಟೆಲಿಕಾಂ ಕಂಪನಿ ಆಗಿದ್ದು ನಂತರ ಕೆಲವು ಖಾಸಗಿ ಕಂಪನಿಗಳು ಬಂದ ನಂತರದಲ್ಲಿ ದಿನೇ ದಿನೇ ತನ್ನ ಅಸ್ತಿತ್ವವನ್ನು ಭಾರತದಲ್ಲಿ ಕಳೆದುಕೊಳ್ಳುತ್ತದೆ ಏಕೆಂದರೆ ಇದು ಹಳೆಯ 2G ಮತ್ತು 3G ತಂತ್ರಜ್ಞಾನವನ್ನು ಬಳಸುತ್ತಿದ್ದು ಹೊಸ ಖಾಸಗಿ ಟೆಲಿಕಾಂ ಸಂಸ್ಥೆಗಳು 4G ಮತ್ತು 5G ಸೇವೆಗಳನ್ನು ನೀಡುತ್ತಿರುವ ಕಾರಣದಿಂದಾಗಿ ದಿನೇ ದಿನೇ ತನ್ನ ಅಸ್ತಿತ್ವವನ್ನು ಭಾರತದಲ್ಲಿ ಕಳೆದುಕೊಳ್ಳುತ್ತದೆ ಮತ್ತು ಪ್ರತಿಯೊಂದು ಜಾಗದಲ್ಲೂ ಕೂಡ ಖಾಸಗಿ ಸಂಸ್ಥೆಗಳು ತಮ್ಮ ಸೇವೆಯನ್ನು ನೀಡುತ್ತಿದ್ದು BSNL  ಕೆಲವು ಸ್ಥಳದಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ಅಥವಾ ತನ್ನ ಸೇವೆಯನ್ನು ನೀಡುತ್ತಿದ್ದ ಕಾರಣ ಈ ಟೆಲಿಕಾಂ ಕಂಪನಿಯು ಭಾರತದಲ್ಲಿ ದಿನೇ ದಿನೇ ಗ್ರಾಹಕರನ್ನು ಕಡಿಮೆ ಮಾಡಿ ಕೊಳ್ಳುತ್ತದೆ ಸದ್ಯ ಇದೀಗ BSNL ಹೊಸ ಬದಲಾವಣೆಗೆ ಮುಂದಾಗಿದ್ದು ಉಚಿತವಾಗಿ ಗ್ರಾಹಕರಿಗೆ ಸಿಮ್ ಕಾರ್ಡ್ ಜೊತೆಗೆ ವಿಶೇಷ ಆಫರ್ ಗಳನ್ನು ಕೂಡ ನೀಡಲು ಮುಂದಾಗಿದೆ. 

BSNL ಗ್ರಾಹಕರಿಗೆ ಸಿಹಿ ಸುದ್ದಿ.

 

ಇತ್ತೀಚಿನ ದಿನಗಳಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಗ್ರಾಹಕರನ್ನು ಆಕರ್ಷಿಸಲು ಬಿಎಸ್ಎನ್ಎಲ್ ಫ್ರೀ ಸಿಮ್ ಕಾರ್ಡ್ ಸ್ಕೀಮ್ ಅನ್ನು ಪರಿಚಯಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಹೊಸ ಗ್ರಾಹಕರಿಗೆ ಸುಲಭವಾಗಿ ಬಿಎಸ್ಎನ್ಎಲ್ ಸೇವೆಗಳನ್ನು ಅನುಭವಿಸುವ ಅವಕಾಶ ನೀಡುವುದಾಗಿದೆ.

ಈ ಯೋಜನೆಯಡಿಯಲ್ಲಿ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಉಚಿತ ಸಿಮ್ ಕಾರ್ಡ್ ಪಡೆಯಬಹುದು. ಸಾಮಾನ್ಯವಾಗಿ ಸಿಮ್ ಕಾರ್ಡ್ ಖರೀದಿಸಲು ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತಿತ್ತು. ಆದರೆ ಈ ಸ್ಕೀಮ್‌ನ ಮೂಲಕ ಆ ಶುಲ್ಕವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮನ್ನಾ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಸಾಮಾನ್ಯ ಜನರಿಗೆ ಹೆಚ್ಚಿನ ಲಾಭವಾಗುತ್ತದೆ.

ಬಿಎಸ್ಎನ್ಎಲ್ ಫ್ರೀ ಸಿಮ್ ಕಾರ್ಡ್ ಸ್ಕೀಮ್ ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವ ಯುವಕರು ಮತ್ತು ಕಡಿಮೆ ಆದಾಯದ ವರ್ಗದ ಜನರಿಗೆ ಸಹಾಯಕವಾಗಿದೆ. ಉಚಿತ ಸಿಮ್ ಜೊತೆಗೆ ಕೆಲವೊಮ್ಮೆ ಉಚಿತ ಟಾಕ್‌ಟೈಮ್, ಡೇಟಾ ಅಥವಾ ವಿಶೇಷ ಆಫರ್‌ಗಳನ್ನೂ ಬಿಎಸ್ಎನ್ಎಲ್ ನೀಡುತ್ತದೆ. ಇದರಿಂದ ಗ್ರಾಹಕರು ಆರಂಭದಲ್ಲೇ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಕರೆ, ಇಂಟರ್ನೆಟ್ ಮತ್ತು ಮೆಸೇಜ್ ಸೇವೆಗಳನ್ನು ಬಳಸಬಹುದು.

ಈ ಸಿಮ್ ಪಡೆಯಲು ಗ್ರಾಹಕರು ಸಮೀಪದ ಬಿಎಸ್ಎನ್ಎಲ್ ಕಚೇರಿ ಅಥವಾ ಅಧಿಕೃತ ರಿಟೈಲರ್‌ಗೆ ಭೇಟಿ ನೀಡಿ, ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಸಲ್ಲಿಸಬೇಕು. ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಿಮ್ ಕಾರ್ಡ್ ಅನ್ನು ತಕ್ಷಣವೇ ಅಥವಾ ಕೆಲವೇ ದಿನಗಳಲ್ಲಿ ಸಕ್ರಿಯಗೊಳಿಸಲಾಗುತ್ತದೆ.

ಒಟ್ಟಿನಲ್ಲಿ, ಬಿಎಸ್ಎನ್ಎಲ್ ಫ್ರೀ ಸಿಮ್ ಕಾರ್ಡ್ ಸ್ಕೀಮ್ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ದೂರಸಂಪರ್ಕ ಸೇವೆ ಪಡೆಯಲು ಸಹಾಯ ಮಾಡುವ ಮಹತ್ವದ ಯೋಜನೆಯಾಗಿದೆ. ಸರ್ಕಾರದ ಸ್ವಾಮ್ಯದ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಶ್ಲಾಘನೀಯವಾಗಿದೆ.

ಖಾಸಗಿ ಕಂಪನಿಗಳ 5G  ನಡುವೆ BSNL ಹೊಸ ಪೈಪೋಟಿ.?

 ಹೌದು ಈಗಾಗಲೇ ತಿಳಿಸಿದ ಹಾಗೆ BSNL  ತನ್ನ ಅಸ್ತಿತ್ವವನ್ನು ಭಾರತದಲ್ಲಿ ದಿನೇ ದಿನೇ ಕಳೆದುಕೊಳ್ಳುತ್ತಾ ಬಂದಿದೆ ಆದರೆ ಇದೀಗ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಪೈಪೋಟಿಗೆ BSNL  ನಿಂತಿದ್ದು ತನ್ನ  ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡಲು ಮುಂದಾಗಿದೆ ಮತ್ತು ಹೊಸ ಗ್ರಹಕರಿಗೆ ಉಚಿತ ಸಿಮ್ ಕಾರ್ಡ್ ಗಳನ್ನು ನೀಡಲು ಮುಂದಾಗಿದೆ ಜೊತೆಗೆ ಹಿಂದಿನ ದಿನದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ 5G  ಸೇವೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿವೆ ಆದರೆ BSNL ಸಂಪೂರ್ಣ ವಿಭಿನ್ನ ಹಾಗೂ ಪ್ರಾಯೋಗಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಅದೇನೆಂದರೆ.

  • ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಗ್ರಾಹಕರಿಗೆ ಕೈಗೆಟಿಕುವ ದರದಲ್ಲಿ ಉತ್ತಮ ಇಂಟರ್ನೆಟ್ ಸೇವೆ ಮತ್ತು ಕರೆಯ ಗುಣಮಟ್ಟ ಮತ್ತು ನೆಟ್ವರ್ಕ್ ಸಿದ್ಧತೆಯನ್ನು ನೀಡಲು ಮುಂದಾಗಿದೆ ಮತ್ತು ಅನೇಕ ಭಾಗಗಳಲ್ಲಿ 5G  ಸೇವೆ ಇದ್ದರು ಅದು ಅಗತ್ಯ ಇಲ್ಲದಿರುವಂತಹ ಗ್ರಾಹಕರಿಗೆ ಇದು ಉತ್ತಮ ಮತ್ತು ಕಡಿಮೆ ದರದಲ್ಲಿ ಸೇವೆ ನೀಡಲು ಮುಂದಾಗಿದೆ ಜೊತೆಗೆ ಇಂಟರ್ನೆಟ್ ಸೇವೆಯಲ್ಲಿ ಉತ್ತಮ ಇಂಟರ್ನೆಟ್ ಸೇವೆಯನ್ನು ಕೂಡ ನೀಡುವ ಉದ್ದೇಶವನ್ನು BSNL  ಹೊಂದಿದೆ.

ದೇಶಾದ್ಯಂತ BSNL  ಉಚಿತ ಸಿಮ್ ಕಾರ್ಡ್ ವಿತರಣೆ.?

BSNLಭಾರತದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳ ವಿರುದ್ಧ ಪೈಪೋಟಿಗೆ ನಿಂತಿದ್ದು ಈಗಾಗಲೇ 5G  ಸೇವೆ ನೀಡುತ್ತಿರುವ ಜಿಯೋ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಂತಹ ಕಂಪನಿಗಳಿಗೆ ಪೈಪೋಟಿ ನೀಡಲು ಉಚಿತವಾಗಿ ಸಿಮ್ ಕಾರ್ಡ್ ನೀಡಲು ಮುಂದಾಗಿದೆ, BSNL ಈಗಾಗಲೇ ಕೆಲವು ಪ್ರದೇಶಗಳಲ್ಲಿ ಉಚಿತ ಸಿಮ್ ಕಾರ್ಡ್ ವಿತರಣೆಯನ್ನು ಆರಂಭಿಸಿದೆ ಮುಂದಿನ ಕೆಲವು ದಿನಗಳಲ್ಲಿ ಈ ಯೋಜನೆಯನ್ನು ದೇಶದಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದ್ದು ನಗರ ಮತ್ತು ಗ್ರಾಮೀಣ ಬಳಕೆದಾರರು ಇಬ್ಬರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಫೋರ್ ಜಿ ಸೇವೆ ಪಡೆಯಬೇಕು ಎಂಬುದು BSNL  ಉದ್ದೇಶ ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಹೆಚ್ಚಾಗಿ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.

  • BSNL ಉತ್ತಮ ಕರೆ ಸ್ಪಷ್ಟತೆ ಮತ್ತು ಡೇಟಾ ವೇಗವನ್ನು ಸುಧಾರಿಸುವುದು ಇದರ ಉದ್ದೇಶ ಆಗಿದೆ
  •  ಗ್ರಾಹಕರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವುದು ಇದರ ಗುರಿ
  • BSNL  ಹೊಸ ಚಂದದಾರರನ್ನು ಆಕರ್ಷಿಸಲು ಮುಂದಾಗಿದೆ
  •  ಮತ್ತು ಹಳೆಯ ಗ್ರಾಹಕರನ್ನು ಕಾಯ್ದುಕೊಳ್ಳುವುದು
  •  ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮರುಪಡೆಯುವುದು BSNL  ಗುರಿ ಮತ್ತು ಉದ್ದೇಶ ಆಗಿದೆ.

 ಉಚಿತ ಸಿಮ್ ಕಾರ್ಡ್ ಜೊತೆಗೆ ವಿಶೇಷ ಆಫರ್ ನೀಡಿದ BSNL.?

 BSNL  ಭಾರತದಲ್ಲಿ ತನ್ನ ಅಸ್ತಿತ್ವವನ್ನು  ಸುಧಾರಿಸಲು ಮತ್ತು ಗ್ರಾಹಕರನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಉಚಿತವಾಗಿ ಸಿಮ್ ಕಾರ್ಡ್ ಗಳನ್ನು ವಿತರಣೆ ಮಾಡಲು ಮುಂದಾಗಿದೆ ಜೊತೆಗೆ ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಸೇವೆಯನ್ನು ಅತಿ ಕಡಿಮೆ ದರದಲ್ಲಿ ಪ್ರತಿಯೊಬ್ಬರಿಗೂ ಕೂಡ ನೀಡುವ ಬರವಸೆಯನ್ನು BSNL   ತನ್ನ ಗ್ರಹಗಳಿಗೆ ನೀಡುತ್ತಿದೆ ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಉತ್ತಮ ಸೇವೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು BSNL   ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಅಂದರೆ ಖಾಸಗಿ ಕಂಪನಿಗಳಲ್ಲಿ ಈಗಾಗಲೇ ಪ್ರತಿ ತಿಂಗಳಿಗೆ ನೀಡುತ್ತಿರುವ ದರದಲ್ಲಿ ಎರಡು ತಿಂಗಳ ಸೇವೆಯನ್ನುBSNL   ತನ್ನ ಗ್ರಾಹಕರಿಗೆ ನೀಡುವುದಾಗಿ ಆಫರ್ ನೀಡಿದೆ ಮತ್ತು ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳ ತಿಂಗಳ ಬೆಲೆಯ ಅರ್ಧದ ಬೆಲೆಗೆ ತನ್ನ ರಿಚಾರ್ಜ್ ಸೇವೆಯನ್ನು ನೀಡುತ್ತಿದ್ದು ಇದೀಗ BSNL   ತನ್ನ ಸಿಮ್ ಕಾರ್ಡ್ಗಳನ್ನು ಉಚಿತವಾಗಿ ಗ್ರಾಹಕರಿಗೆ ನೀಡಲಾಗುತ್ತಿದ್ದು  ನೀವು ಕೂಡ ಉಚಿತವಾಗಿ ಸಿಮ್ ಕಾರ್ಡ್ ಪಡೆಯಬಹುದಾಗಿದೆ ಧನ್ಯವಾದಗಳು..