Paramilitary recruitment: ಪದವಿ ಪಾಸ್ ಆದವರಿಗೆ ಪ್ಯಾರಾ ಮಿಲಿಟರಿ ಪಡೆಯಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.?
ಎಲ್ಲರಿಗೂ ನಮಸ್ಕಾರ.. ಪದವಿ ಹೊಂದಿದ್ದು ಪ್ಯಾರಾ ಮಿಲಿಟರಿ ಪಡೆಯಲಿ ಉದ್ಯೋಗ ಪಡೆಯಬೇಕು ಎಂಬ ಕನಸು ಕಟ್ಟಿರುವಂತಹ ಅಭ್ಯರ್ಥಿಗಳಿಗೆ ಇದೀಗ ಸಿಹಿ ಸುದ್ದಿ ಬಂದಿದೆ. ಹೌದು ದೇಶದ ಪ್ಯಾರಾ ಮಿಲಿಟರಿ ಪಡೆಗಳ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುವ ಯುವಕ ಯುವತಿಯರಿಗೆ ಒಂದು ಹೊಸ ಅವಕಾಶ ಒದಗಿ ಬಂದಿದೆ. ಯಾವುದೇ ಪದವಿ ಪಾಸ್ ಹಾಗಿದ್ದರೆ ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಕಮೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಕನಸನ್ನು ನನಸಾಗಿಸಿಕೊಳ್ಳುವ ಅವಕಾಶ ನೀಡಲಾಗಿದೆ.
ಭಾರತ ಕೇಂದ್ರದ ಲೋಕಸಭಾ ಆಯೋಗವು ಕೇಂದ್ರ ಗೃಹ ಇಲಾಖೆಯ ಅಂಗ ಸಂಸ್ಥೆ ಆದ ಕೇಂದ್ರೀಯ ಶಶಾಸ್ತ್ರ ಪೊಲೀಸ್ ಪಡೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ 349 ಅಸಿಸ್ಟೆಂಟ್ ಗ್ರೂಪ್ ಎ ಹುದ್ದೆಗಳ ಬರ್ತಿಗೆ ನೇಮಕಾತಿ ಪರೀಕ್ಷೆ ನಡೆಸಲು ಮುಂದಾಗಿದೆ ಈ ಹುದ್ದೆಗೆ ಪದವಿ ಹೊಂದಿರುವ ಯಾವುದೇ ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.
ಪ್ಯಾರಾ ಮಿಲಿಟರಿ ಹುದ್ದೆಗಳ ಮಹತ್ವ
ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಪ್ಯಾರಾ ಮಿಲಿಟರಿ ಪಡೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಇವುಗಳನ್ನು ಸಾಮಾನ್ಯವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (Central Armed Police Forces) ಎಂದು ಕರೆಯಲಾಗುತ್ತದೆ. ದೇಶದ ಒಳಾಂಗಣ ಭದ್ರತೆ, ಗಡಿ ರಕ್ಷಣಾ ಕಾರ್ಯ, ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗಳು ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಇವುಗಳಿಗೆ ಇದೆ.
ಪ್ರಮುಖ ಪ್ಯಾರಾ ಮಿಲಿಟರಿ ಪಡೆಗಳಲ್ಲಿ Border Security Force (BSF), Central Reserve Police Force (CRPF), Central Industrial Security Force (CISF), Indo-Tibetan Border Police (ITBP) ಹಾಗೂ Sashastra Seema Bal (SSB) ಸೇರಿವೆ. ಪ್ರತಿಯೊಂದು ಪಡೆಯಿಗೂ ವಿಭಿನ್ನ ಜವಾಬ್ದಾರಿಗಳಿವೆ. ಉದಾಹರಣೆಗೆ, BSF ಗಡಿ ರಕ್ಷಣೆಯಲ್ಲಿ ತೊಡಗಿಸಿಕೊಂಡರೆ, CRPF ಒಳಾಂಗಣ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. CISF ಪ್ರಮುಖ ಸರ್ಕಾರಿ ಮತ್ತು ಕೈಗಾರಿಕಾ ಸಂಸ್ಥೆಗಳ ಭದ್ರತೆಯನ್ನು ನೋಡಿಕೊಳ್ಳುತ್ತದೆ.
ಪ್ಯಾರಾ ಮಿಲಿಟರಿ ಹುದ್ದೆಗಳಿಗೆ ಸೇರಲು 10ನೇ ತರಗತಿ, 12ನೇ ತರಗತಿ ಅಥವಾ ಪದವಿ ಅರ್ಹತೆ ಅಗತ್ಯವಾಗಬಹುದು. ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯುತ್ತವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಠಿಣ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಾರೀರಿಕ ಸಾಮರ್ಥ್ಯ, ಶಿಸ್ತಿನ ಜೀವನ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ.
ಪ್ಯಾರಾ ಮಿಲಿಟರಿ ಸೇವೆ ದೇಶಭಕ್ತಿಯ ಚಿಹ್ನೆಯಾಗಿದ್ದು, ಗೌರವಾನ್ವಿತ ವೃತ್ತಿಯಾಗಿದೆ. ಉತ್ತಮ ವೇತನ, ಭತ್ಯೆಗಳು, ನಿವೃತ್ತಿ ಸೌಲಭ್ಯಗಳು ಹಾಗೂ ಕುಟುಂಬ ಭದ್ರತೆ ನೀಡಲಾಗುತ್ತದೆ. ದೇಶದ ಸುರಕ್ಷತೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುವ ಈ ಯೋಧರು ನಮ್ಮ ಸಮಾಜದ ನಿಜವಾದ ಹೀರೋಗಳು.
ಹೀಗಾಗಿ, ಪ್ಯಾರಾ ಮಿಲಿಟರಿ ಹುದ್ದೆ ಯುವಕರಿಗೆ ಶ್ರೇಷ್ಠ ವೃತ್ತಿ ಆಯ್ಕೆಯಾಗಿದ್ದು, ದೇಶ ಸೇವೆ ಮಾಡಲು ಒಳ್ಳೆಯ ಅವಕಾಶವಾಗಿದೆ.
ಅಸಿಸ್ಟೆಂಟ್ ಕಮೆಂಟೆಂಟ್ ಗ್ರೂಪ್ ಎ ಹುದ್ದೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.
ಭಾರತೀಯ ಪ್ಯಾರಮೀಲಿಟರಿ ಎಲ್ಲಿ ಕಾಲಿ ಇರುವ ಅಸಿಸ್ಟೆಂಟ್ ಕಮೆಂಡೆಂಟ್ ಗ್ರೂಪ್ ಎ ಹುದ್ದೆಗಳ ನೇಮಕಾತಿಗೆ ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾಲಯಗಳಲ್ಲಿ ಯಾವುದೇ ಪದವಿ ಪಾಸಾದ ಅಥವಾ ಅದಕ್ಕೆ ತತ್ಸಮಾನವಾದ ಶೈಕ್ಷಣಿಕ ಅರ್ಹತೆ ಹೊಂದಿರುವ ಯುವಕ ಯುವತಿಯರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ವಯಸ್ಸು ಪೂರೈಸಿರಬೇಕು ಗರಿಷ್ಠ 25 ವರ್ಷ ಮೀರಿರಬಾರದು ಇನ್ನು ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಮತ್ತು ಅರ್ಜಿ ಶುಲ್ಕ 200 ರೂಪಾಯಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಸಿಸ್ಟೆಂಟ್ ಕಮೆಂಟೆಂಟ್ ಗ್ರೂಪ್ ಎ ಹುದ್ದೆಗಳ ವಿಂಗಡಣೆ ಮತ್ತು ಆಯ್ಕೆ ಪ್ರಕ್ರಿಯೆ.
ಭಾರತದ ಪ್ಯಾರಾ ಮಿಲಿಟರಿ ಎಲ್ಲಿ ಕಾಲಿ ಇರುವ ಅಸಿಸ್ಟೆಂಟ್ ಕಮೆಂಡೆಂಟ್ ಗ್ರೂಪ್ ಎ ಹುದ್ದೆಗಳ ನೇಮಕಾತಿಯಲ್ಲಿ ಒಟ್ಟು 349 ಹುದ್ದೆಗಳು ಖಾಲಿ ಇದ್ದು ಇದರಲ್ಲಿ.
- ಬಿಎಸ್ಎಫ್ 108 ಹುದ್ದೆಗಳು
- ಸಿ ಆರ್ ಪಿ ಎಫ್ 106 ಹುದ್ದೆಗಳು
- ಸಿಐಎಸ್ಎಫ್ ಒಟ್ಟು 70 ಹುದ್ದೆಗಳು
- ಎಸ್ ಎಸ್ ಡಿ 53 ಹುದ್ದೆಗಳು
- ಐಟಿ ಬಿಪಿ 12 ಹುದ್ದೆಗಳು
ಅಸಿಸ್ಟೆಂಟ್ ಕಮೆಂಡೆಂಟ್ ಹುದ್ದೆಗಳ ಆಯ್ಕೆ ಪ್ರಕ್ರಿಯೆ.?
ಅಸಿಸ್ಟೆಂಟ್ ಕಮೆಂಟೆಂಟ್ ಗ್ರೂಪ್ ಎ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ , ಹೌದು ಮೊದಲು ಲಿಖಿತ ಪರೀಕ್ಷೆ ಇರಲಿದೆ ಇರಲಿ ಎರಡು ಪತ್ರಿಕೆಗಳು ಇರಲಿವೆ ಒಟ್ಟು 600 ಅಂಕಗಳಿಗೆ ಜುಲೈ 19ಕ್ಕೆ ಒಂದು ದಿನ ಪರೀಕ್ಷೆ ನಡೆಯಲಿದೆ, ಮೊದಲ ಪತ್ರಿಕೆ 250 ಅಂಕಗಳಿಗೆ ಇರಲಿದ್ದು ಎರಡು ಗಂಟೆ ಅವಧಿಯದ್ದಾಗಿದೆ ಇದು ಬಹುಆಯ್ಕೆ ಮಾದರಿಯಲ್ಲಿ ಪ್ರಶ್ನೆಗಳನ್ನು ಹೊಂದಿದ್ದು ನೆಗೆಟಿವ್ ಅಂಕಗಳು ಇರಲಿವೆ.
ಇನ್ನು ಎರಡನೇ ಪತ್ರಿಕೆ ವಿವರಣಾತ್ಮಕ ಪತ್ರಿಕೆ ಆಗಿರಲಿದೆ ಇದು 200 ಅಂಕಗಳನ್ನು ಹೊಂದಿದ್ದು ಎರಡು ಗಂಟೆ ಸಮಯ ನಿಗದಿಯಾಗಿರುತ್ತದೆ, ಸಂದರ್ಶನಕ್ಕೆ 150 ಅಂಕಗಳು ಇರಲಿವೆ ಎರಡು ಪತ್ರಿಕೆಗಳಿಗೆ ಕನಿಷ್ಠ ಅಂಕ ಇದೆ ಇದನ್ನು ಪೂರೈಸದಿದ್ದರೆ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗುವುದಿಲ್ಲ ಇಂಗ್ಲಿಷ್ ಹಿಂದಿಯಲ್ಲಿ ಪರೀಕ್ಷೆಗಳು ನಡೆಯಲಿದೆ, ಇನ್ನು ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಮೆರಿಟ್ ಆಧಾರದ ಮೇಲೆ ಮುಂದಿನ ಹಂತಕ್ಕೆ ಹೋಗುತ್ತಾರೆ ಅಂದರೆ ದೈಹಿಕ ಸಾಮರ್ಥ್ಯ ದೈಹಿಕ ಸಹಿಷ್ಣತೆ ಪರೀಕ್ಷೆ ಎದುರಿಸಬೇಕಾಗುತ್ತದೆ ನಂತರ ವೈದ್ಯಕೀಯ ಹಾಗೂ ದಾಖಲೆಗಳ ಪರಿಶೀಲನೆ ನಡೆದು ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ವಿಧಾನ.?
ಭಾರತೀಯ ಪ್ಯಾರಾ ಮಿಲಿಟರಿ ಪಡೆಯಲಿ ಕಾಲಿ ಇರುವ ಅಸಿಸ್ಟೆಂಟ್ ಕಮೆಂಟೆಂಟ್ ಹುದ್ದೆಗಳ ನೇಮಕಾತಿಗೆ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗಿದೆ ಈ ಹುದ್ದೆಗೆ ಯುವಕ ಯುವತಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶವನ್ನು ನೀಡಲಾಗಿದೆ ಅರ್ಜಿ ಸಲ್ಲಿಸಲು ಇದೆ ಫೆಬ್ರವರಿ 20ನೇ ದಿನಾಂಕದಿಂದ ಮಾರ್ಚ್ 12ನೇ ದಿನಾಂಕದವರೆಗೆ ಅವಕಾಶವನ್ನು ನೀಡಲಾಗಿದ್ದು ಫೆಬ್ರವರಿ 12ನೇ ದಿನಾಂಕ ರಾತ್ರಿ 12:00 ಕೊನೆ ಆಗಿರುತ್ತದೆ ಇನ್ನು ಈಗಾಗಲೇ ತಿಳಿಸಿದ ಹಾಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದ್ದು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಈ ವೆಬ್ಸೈಟ್ಗೆ ಭೇಟಿ ನೀಡಿ ( https://upsconline.gov.in )ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈಗಲೇ ಅರ್ಜಿ ಸಲ್ಲಿಸಿ ಧನ್ಯವಾದಗಳು