Telegram Join My Telegram WhatsApp Join My WhatsApp

PM Kisan Yojana :ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ 2000 ಹಣ ರೈತರ ಖಾತೆಗೆ ಜಮಾ. ಲಿಸ್ಟ್ ಬಿಡುಗಡೆ ಈಗಲೇ ಸ್ಟೇಟಸ್ ಚೆಕ್ ಮಾಡಿ.?

PM Kisan Yojana :ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ 2000 ಹಣ ರೈತರ ಖಾತೆಗೆ ಜಮಾ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಈಗಾಗಲೇ ರೈತರಿಗೆ 21  ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ,  ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆ ಅಡಿಯಲ್ಲಿ  ಕೋಟ್ಯಾಂತರ ರೈತರಿಗೆ ಬೆಂಬಲವಾಗಿ ನಿಂತಿದೆ ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಪ್ರತಿವರ್ಷ ಆರು ಸಾವಿರ ಹಣ ಒಟ್ಟು ಮೂರು ಹಂತದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಇದುವರೆಗೆ ಈಗಾಗಲೇ ಹೇಳಿದ ಹಾಗೆ 21 ಕಂತಿನ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಿದ್ದು ರೈತರು ಕೃಷಿ ವೆಚ್ಚಗಳು ಮತ್ತು ಇತರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಯ ಇತ್ತೀಚಿನ ಮಾಹಿತಿಗಳ ಪ್ರಕಾರ ಈ ಯೋಜನೆ ಅಡಿಯಲ್ಲಿ ನಮ್ಮ ದೇಶದ ಒಟ್ಟು 12 ಕೋಟಿ ಹೆಚ್ಚು ರೈತರು ಲಾಭವನ್ನು ಪಡೆಯುತ್ತಿದ್ದಾರೆ ಮತ್ತು ಈ ಯೋಜನೆಯು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ ಜೊತೆಗೆ ಈ ಯೋಜನೆಯಿಂದ ರೈತರ ಆದಾಯವನ್ನು  ಸದೃಢಪಡಿಸಬಹುದು ಮತ್ತು ಕೃಷಿಗೆ ಯೋಜನೆಯು ಸ್ವಲ್ಪಮಟ್ಟಿನ ಆರ್ಥಿಕ ಸಹಾಯವನ್ನು ನೀಡುವಂತಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಭಾರತ ಸರ್ಕಾರವು ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಆರಂಭಿಸಿದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯನ್ನು 2019ರಲ್ಲಿ ಆರಂಭಿಸಲಾಯಿತು. ಕೃಷಿ ದೇಶದ ಬೆನ್ನೆಲುಬು ಎಂಬುದನ್ನು ಮನಗಂಡು, ಸಣ್ಣ ಮತ್ತು ಅಲ್ಪ ಭೂಸ್ವಾಮ್ಯ ಹೊಂದಿರುವ ರೈತರಿಗೆ ನೇರ ಆರ್ಥಿಕ ನೆರವು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಹಣಕಾಸು ಸಹಾಯ ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ (ಪ್ರತಿ ಕಂತಿಗೆ ₹2,000) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಡಿಬಿಟಿ (Direct Benefit Transfer) ವ್ಯವಸ್ಥೆಯ ಮೂಲಕ ಹಣ ನೇರವಾಗಿ ಖಾತೆಗೆ ಬರುವುದರಿಂದ ಮಧ್ಯವರ್ತಿಗಳ ಸಮಸ್ಯೆ ತಪ್ಪುತ್ತದೆ ಮತ್ತು ಪಾರದರ್ಶಕತೆ ಹೆಚ್ಚುತ್ತದೆ.

PM-KISAN ಯೋಜನೆಯ ಪ್ರಮುಖ ಪ್ರಯೋಜನವೆಂದರೆ ರೈತರು ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಇತರ ಕೃಷಿ ಅಗತ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದು. ಇದರಿಂದ ಕೃಷಿ ವೆಚ್ಚದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ರೈತರ ಆದಾಯವನ್ನು ಸ್ಥಿರಗೊಳಿಸಲು ಸಹ ಇದು ಸಹಕಾರಿಯಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಭೂ ದಾಖಲೆಗಳನ್ನು ಒದಗಿಸಬೇಕು. ಸರ್ಕಾರದ ಅಧಿಕೃತ PM-KISAN ಪೋರ್ಟಲ್ ಮೂಲಕ ಅಥವಾ ಗ್ರಾಮ ಒನ್/ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಬಹುದು. ಸರ್ಕಾರ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ರೈತರನ್ನು ಆಯ್ಕೆ ಮಾಡುತ್ತದೆ.

ಈ ಯೋಜನೆ ದೇಶದ ಕೋಟ್ಯಾಂತರ ರೈತರಿಗೆ ಸಹಾಯ ಮಾಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ಸ್ಥಿರತೆ ತರಲು ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸಲು ಇದು ಪರಿಣಾಮಕಾರಿ ಹೆಜ್ಜೆಯಾಗಿದೆ. ರೈತರ ಕಲ್ಯಾಣವೇ ದೇಶದ ಪ್ರಗತಿ ಎಂಬ ದೃಷ್ಟಿಯಿಂದ PM-KISAN ಯೋಜನೆ ಬಹು ಮಹತ್ವದ್ದಾಗಿದೆ. ಸರ್ಕಾರದ ಇಂತಹ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡರೆ ರೈತರು ಆರ್ಥಿಕವಾಗಿ ಮತ್ತಷ್ಟು ಸದೃಢರಾಗಬಹುದು.

ಪಿ ಎಮ್ ಕಿಸಾನ್ ಯೋಜನೆಯ 22ನೇ ಕಂತಿನ 2000 ರೈತರ ಖಾತೆಗೆ ಜಮಾ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಲ್ಲಿ ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಂದು ಕಂತು ಹಣ ಬಿಡುಗಡೆ ಆಗುತ್ತದೆ  ಈಗಾಗಲೇ ಪಿಎಮ್ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಒಟ್ಟು 21 ಕಂತಿನ ಹಣ ಬಿಡುಗಡೆ ಆಗಿದ್ದು ಇದೀಗ 2026 ನೇ ಸಾಲಿನ ಮೊದಲನೇ ಕಂತಿನ ಹಣ ಅಂದರೆ 22ನೇ ತಂತಿನ 2000 ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.  ಈ ಕಂತಿನಲ್ಲಿ ಅರ್ಹ ರೈತರಿಗೆ 2000 ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದ್ದು ರೈತರ  ಅಗತ್ಯತೆಗಳನ್ನು ಪೂರೈಕೆ ಮಾಡಲು ಅನುಕೂಲ ಆಗಲಿದೆ.  ಸದ್ಯ ಕೇಂದ್ರ ಸರ್ಕಾರದಿಂದ ಈಗಾಗಲೇ ತಿಳಿಸಿದ ಹಾಗೆ ಒಟ್ಟು 21 ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ವರ್ಷ ಮೂರು ಕಂತುಗಳಂತೆ 6000 ಹಣವನ್ನು ಜಮಾ ಮಾಡಲಾಗಿದ್ದು ಇದೀಗ  22ನೇ ಕಂತಿನ  2000 ಹಣ ಬಿಡುಗಡೆಗೆ ಮುಂದಾಗಿದ್ದು ಇದೀಗ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಅಗತ್ಯ ಅರ್ಹತೆಗಳು ಹಾಗೂ ಕ್ರಮಗಳು.

22ನೇ ಕಂತಿನ ಹಣ ಸರಿಯಾಗಿ ರೈತರು ತಮ್ಮ ಬ್ಯಾಂಕ್ ಖಾತೆಗೆ ಪಡೆಯಲು ಕೆಲವು ಮುಖ್ಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಮೊದಲಿಗೆ e-kyc  ಕಡ್ಡಾಯವಾಗಿ ಮಾಡಿಸಲೇ ಬೇಕಾಗಿರುತ್ತದೆ ಇದನ್ನು ಆನ್ಲೈನ್ ನಲ್ಲಿ ಓಟಿಪಿ ಪಡೆಯುವ ಮೂಲಕ ಅಥವಾ ಹತ್ತಿರದ ಸಿ ಎಸ್ ಸಿ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ  ಮಾಡಿಸಿಕೊಳ್ಳಬಹುದಾಗಿದೆ.

 ಎರಡನೆಯದಾಗಿ ಫಾರ್ಮರ್ ಐಡಿ ಅಂದರೆ ರೈತ ಗುರುತು ಸಂಖ್ಯೆ ಅಗತ್ಯವಾಗಿರುತ್ತದೆ ಇದು ರೈತರ ಮಾಹಿತಿಯನ್ನು ಏಕೀಕರಿಸಿ ಪುನರಾವರ್ತನೆಗಳನ್ನು ನಿರ್ಬಂಧಿಸುತ್ತದೆ ಇನ್ನು ಮೂರನೆಯದಾಗಿ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ಗೆ ಕಡ್ಡಾಯವಾಗಿ ಲಿಂಕ್ ಮಾಡಿಸಿರಬೇಕು ಜೊತೆಗೆ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕಾಗುತ್ತದೆ. ಕೊನೆಯದಾಗಿ ಜಮೀನು ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿರಬೇಕು ಇದು ಕೂಡ ಕಡ್ಡಾಯ ಆಗಿರುತ್ತದೆ.

 ಈ ಮೇಲೆ ತಿಳಿಸಲಾದ ಎಲ್ಲಾ ಕ್ರಮಗಳನ್ನು ಕಡ್ಡಾಯವಾಗಿ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯುವವರು ಪಾಲಿಸಲಿ ಬೇಕಾಗುತ್ತದೆ ಇಲ್ಲವಾದಲ್ಲಿ ಅಂತಹ ರೈತರಿಗೆ ಹಣ ಜಮಾ ಆಗುವುದಿಲ್ಲ 

ಪಿಎಂ ಕಿಸಾನ್ ಯೋಜನೆಯ  ಪಟ್ಟಿಯ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ.?

 ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಇದೆ ಫೆಬ್ರವರಿ ತಿಂಗಳ ಕೊನೆಯ ಒಳಗಾಗಿ  ಜಮಾ ಆಗಲಿದೆ ಆದರೆ ಪ್ರತಿ ಫಲಾನುಭವಿಯು ಸರ್ಕಾರದ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಅವುಗಳನ್ನು ಈಗಾಗಲೇ ಈ ಮೇಲೆ ತಿಳಿಸಲಾಗಿದ್ದು ಇದೀಗ ಪಿಎಂ ಕಿಸಾನ್ ಯೋಜನೆಯ  22ನೇ  ಕಂತಿನ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ನಿಮ್ಮ ಮೊಬೈಲ್ ಮೂಲಕವೇ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

 ರೈತರು ತಮ್ಮ ಮೊಬೈಲ್ ನಿಂದಲೇ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

  • pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ
  •   ಹೋಂ ಪೇಜ್ ನಲ್ಲಿ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಿ
  •  ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಿ
  •  ಓಟಿಪಿ ಪರಿಶೀಲನೆ ಮುಗಿದ ನಂತರ ಸ್ಟೇಟಸ್ ವಿವರಗಳು ಕಾಣಿಸುತ್ತದೆ

ಈ ರೀತಿ ಪಿ ಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲಿ ಯೋಜನೆಯ ಸ್ಟೇಟಸ್ ಮಾಡಿಕೊಳ್ಳಬಹುದಾಗಿದೆ.

 ಫಲಾನುಭವಿಗಳ ಪಟ್ಟಿಯಲ್ಲಿ  ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ.?

 ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ  ಕೋಟಿ ಅಂತರ ಫಲಾನುಭವಿಗಳಿದ್ದು ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಲು  ಈ ಕೆಳಗಿನಂತೆ ಮಾಡಬೇಕಾಗುತ್ತದೆ ಮೊದಲಿಗೆ..

  • pmkisan.gov.in ವೆಬ್ಸೈಟ್ಗೆ ಹೋಗಿ
  •  ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
  •  ನಂತರ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ
  •  ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ಪಟ್ಟಿಯಲ್ಲಿ ಬರುತ್ತದೆ

 ಈ ರೀತಿ ನೀವು ಸುಲಭವಾಗಿ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ಸ್ಟೇಟಸ್ ಅನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಜೊತೆಗೆ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಪಿಎಮ್ ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆಗಳಾದ 1800-115-526 ಅಥವಾ 011-23381092 ಕರೆ ಮಾಡಿ ಧನ್ಯವಾದಗಳು.