Telegram Join My Telegram WhatsApp Join My WhatsApp

Ration card Karnataka: ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ.! ಪಡಿತರ ವಿತರಣೆಯಲ್ಲಿ ಹೊಸ ಬದಲಾವಣೆ.?

 

Ration  card Karnataka: ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ. ಕರ್ನಾಟಕ ರಾಜ್ಯ ಸರ್ಕಾರದಿಂದ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 10 ಕೆಜಿಯಂತೆ ಪಡಿತರವನ್ನು ನೀಡುತ್ತಿದೆ ಸದ್ಯ ಈಗಾಗಲೇ ರಾಜ್ಯದ ಕೋಟ್ಯಾಂತರ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ರೇಷನ್ ಪಡೆದು ಜೀವನವನ್ನು ನಡೆಸುತ್ತಿದ್ದು ರಾಜ್ಯ ಸರ್ಕಾರವು ಈ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಗೊಳಿಸಿದೆ ಸದ್ಯ ಇದೀಗ ರಾಜ್ಯ ಸರ್ಕಾರದಿಂದ ಅಂದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ಸಿಹಿ ಸುದ್ದಿಯನ್ನು ನೀಡಿದೆ ಅದೇನೆಂದರೆ ರೇಷನ್ ಕಾರ್ಡ್ ಹೊಂದಿದ್ದು ರೇಷನ್ ಪಡೆಯುತ್ತಿದ್ದಂತಹ ಫಲಾನುಭವಿಗಳಿಗೆ ಒಂದು ಹೊಸ ಬದಲಾವಣೆಯನ್ನು ತಂದಿದೆ.

ಹೌದು ಈಗಾಗಲೇ ಹೇಳಿದ ಹಾಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಉಚಿತವಾಗಿ ಪಡಿತರವನ್ನು ನೀಡಲಾಗುತ್ತಿದೆ ಇನ್ನು  2023ರಲ್ಲಿ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಪಕ್ಷವು ಪ್ರತಿ ಸದಸ್ಯರಿಗೆ 10 ಕೆಜಿಯಂತೆ ಪಡಿತರ ವಿತರಣೆ ಮಾಡಲು ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈಗಾಗಲೇ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಪಡಿತರವನ್ನು ನೀಡಿಕೊಂಡು ಬಂದಿದ್ದು ಈ ಯೋಜನೆಯನ್ನು ಯಶಸ್ವಿಗೊಳಿಸಿದೆ ಸದ್ಯ ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ರೇಷನ್ ಪಡೆಯುವವರಿಗೆ ಮತ್ತಷ್ಟು ಸುಲಭ ಮಾಡಲು ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದೆ ಈ ಯೋಜನೆಯ ಮೂಲಕ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ಪಡೆಯುವವರಿಗೆ ಮತ್ತಷ್ಟು ಸುಲಭ ಆಗಲಿದೆ.

ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ.! 

ಎಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ  ರೇಷನ್ ಕಾರ್ಡ್ ಹೊಂದಿರುವ ಮನೆಯ ಪ್ರತಿ ಸದಸ್ಯರಿಗೆ 10 ಕೆಜಿ ಅಂತೆ ಪಡಿತರವನ್ನು ಪ್ರತಿ ತಿಂಗಳು ನೀಡಲಾಗುತ್ತದೆ ಆದರೆ ಈ ಪಡಿತರ ಪಡೆಯುವ ಸಮಯದಲ್ಲಿ ಆಗುತ್ತಿದ್ದಂತಹ ತಾಂತ್ರಿಕ ದೋಷಗಳು ಅಥವಾ ಪಡಿತರ ಪಡೆಯಲು ಬಯೋಮೆಟ್ರಿಕ್ ಸಮಸ್ಯೆಗಳು ಎದುರಾಗುತ್ತಿದ್ದು ರೇಷನ್ ಕಾರ್ಡ್ ಹೊಂದಿರುವವರಿಗೆ ಇದೊಂದು ದೊಡ್ಡ ಸಮಸ್ಯೆ ಆಗಿತ್ತು ಹಾಗಾಗಿ ಈ ಸಮಸ್ಯೆಯನ್ನು ಸರಿಪಡಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದ್ದು ಈ ಬಯೋಮೆಟ್ರಿಕ್ ಸಮಸ್ಯೆಯಿಂದ ಅಥವಾ ಸರ್ವರ್ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ಷಾಂತರ ಜನರಿಗೆ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ತಿಳಿಸಲಾಗಿದೆ 

ಹೌದು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಪಡೆಯಲು ತಮ್ಮ ಬೆರಳಚ್ಚು ನೀಡಿ ಬಯೋಮೆಟ್ರಿಕ್ ದೃಢೀಕರಣ ಮಾಡಬೇಕಾಗಿತ್ತು ಆದರೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ  ಸರಿಯಾಗಿ ಇಲ್ಲದಿರುವುದು ಅಥವಾ ಸರ್ವರ್ ಸಮಸ್ಯೆ ಮತ್ತು ಬೆರಳಚ್ಚು ಬರದೆ ಇರುವುದು ರೇಷನ್ ಕಾರ್ಡ್ ಹೊಂದಿರುವವರಿಗೆ ಪಡಿತರ ಪಡೆಯಲು ತೊಂದರೆ ಆಗುತ್ತಿತ್ತು ಜೊತೆಗೆ  ವೃದ್ಧರು ಮತ್ತು ಕೂಲಿ ಕಾರ್ಮಿಕರ ಬೆರಳಚ್ಚು ಸ್ಪಷ್ಟವಾಗಿ ಇಲ್ಲದೆ ಇರುವ ಕಾರಣ ಹೆಚ್ಚಾಗಿ ಇಂಥವರಿಗೆ ಸಮಸ್ಯೆ ಆಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದಿಂದ OTP  ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ರೇಷನ್ ಪಡೆಯುವವರಿಗೆ ಹೊಸ  ಬದಲಾವಣೆಗೆ ಸಿದ್ಧತೆ.?

ಈಗಾಗಲೇ ಹೇಳಿದ ಹಾಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆ ಜೊತೆಗೆ ಸರ್ವರ್ ಸಮಸ್ಯೆ ಮತ್ತು ಬೆರಳಚ್ಚು ಅಥವಾ ಬಯೋಮೆಟ್ರಿಕ್ ದೃಢೀಕರಣ ಸಮಸ್ಯೆಗಳು ರೇಷನ್ ಪಡೆಯುವವರಿಗೆ ಹೆಚ್ಚಾಗಿ ಕಾಡುತ್ತಿತ್ತು ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ  ಬೆರಳಚ್ಚುಗಳು ಸ್ಪಷ್ಟವಾಗಿ ಇಲ್ಲದೆ ಇರುವ ಕಾರಣ ಈ ಸಮಸ್ಯೆಗಳು ಎದುರಾಗುತ್ತಿದ್ದವು. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ಜನರು ಪಡಿತರ ಪಡೆಯಲು ಸಮಸ್ಯೆ ಅನುಭವಿಸುತ್ತಿದ್ದರು ಹಾಗಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಈ ಸಮಸ್ಯೆಯನ್ನು ಪರಿಹರಿಸಲು ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.  

  • ಹೌದು ಇನ್ನು ಮುಂದೆ ಪಡಿತರ ಪಡೆಯಲು ಅಥವಾ ರೇಷನ್ ಪಡೆಯಲು ಬಯೋಮೆಟ್ರಿಕ್ ಅವಶ್ಯಕತೆ ಇಲ್ಲ. ಬದಲಾಗಿ ರೇಷನ್ ಕಾರ್ಡ್ ಹೊಂದಿರುವ ಮನೆಯ ಸದಸ್ಯರ ನೊಂದಾಯಿತ ಸಂಖ್ಯೆಯ ಒನ್ ಟೈಮ್ ಪಾಸ್ವರ್ಡ್ OTP  ಇದ್ದರೆ ಸಾಕು ಸರ್ಕಾರದ ಅನ್ನ ಭಾಗ್ಯ ಯೋಜನೆಯ ಉಚಿತ ಪಡಿತರವನ್ನು ಪಡೆಯಬಹುದಾಗಿದೆ 

ರೇಷನ್ ಕಾರ್ಡ್ ಹೊಂದಿರುವವರಿಗೆ OTP ಮೂಲಕ ರೇಶನ್ ವಿತರಣೆ.

ಆಹಾರ ನಾಗರಿಕ ಪೂರೈಕೆ ಇಲಾಖೆಯ ಕಡೆಯಿಂದ  ರೇಷನ್ ಪಡೆಯಲು ಮತ್ತಷ್ಟು ಸುಲಭ ಆಗಲಿ ಎಂದು ಫಲಾನುಭವಿಗಳಿಗೆ ರೇಷನ್ ಪಡೆಯಲು ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ OTP  ಸೌಲಭ್ಯವನ್ನು ಜಾರಿ ಮಾಡಿದೆ ಇದು ಕೇವಲ ರೇಷನ್ ಪಡೆಯುವವರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಕೂಡ ಅನುಕೂಲ ಮಾಡಲಿದೆ ಏಕೆಂದರೆ ಈ ಮೊದಲು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯದವರ ರೇಷನ್ ಕೂಡ ಸರ್ಕಾರಕ್ಕೆ ಸಿಗುತ್ತಿರಲಿಲ್ಲ ಆದರೆ ಈ ಹೊಸ ಒನ್ ಟೈಮ್ ಪಾಸ್ವರ್ಡ್ ಯೋಜನೆಯ ಮೂಲಕ ರಾಜ್ಯದಲ್ಲಿ ಫಲಾನುಭವಿಗಳಿಗೆ ಅನುಕೂಲ ಆಗುವುದರ ಜೊತೆಗೆ ಸರ್ಕಾರಕ್ಕೂ ಕೂಡ ಈ ಯೋಜನೆಯ ಅನುಕೂಲ ಆಗಲಿದೆ 

ಒಟ್ಟಿನಲ್ಲಿ OTP  ಆಧರಿತ ಪಡಿತರ ವಿತರಣಾ ವ್ಯವಸ್ಥೆ ಜಾರಿ ಆಗುವುದರಿಂದ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ ಸರ್ಕಾರ ಕೈಗೊಂಡಿರುವ ಈ ಹೊಸ ವ್ಯವಸ್ಥೆ ಮೇಲಿನ ನಂಬಿಕೆ ಹೆಚ್ಚಾಗುವುದರ ಜೊತೆಗೆ ನಿಜವಾದ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಆಹಾರ ದೊರಕುವಂತೆ ಆಗಲಿದೆ ಜೊತೆಗೆ ಇದು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬ ದವರಿಗೂ ಕೂಡ ಮಹತ್ವದ ಬದಲಾವಣೆಯನ್ನು ತರಲಿದೆ.  ಧನ್ಯವಾದಗಳು..

ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಸರ್ಕಾರ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ವ್ಯವಸ್ಥೆಯಲ್ಲಿ ರೇಷನ್ ಪಡೆಯಲು ಬಯೋಮೆಟ್ರಿಕ್ (ಬೆರಳಚ್ಚು) ಅವಶ್ಯಕತೆ ಇಲ್ಲದೆ, OTP (ಒನ್ ಟೈಮ್ ಪಾಸ್ವರ್ಡ್) ಮೂಲಕವೇ ರೇಷನ್ ಪಡೆಯುವ ಅವಕಾಶ ಒದಗಿಸಲಾಗಿದೆ. ಈ ಕ್ರಮವು ಜನಸಾಮಾನ್ಯರಿಗೆ, ವಿಶೇಷವಾಗಿ ಹಿರಿಯ ನಾಗರಿಕರು, ಕೂಲಿ ಕಾರ್ಮಿಕರು ಹಾಗೂ ಕೈಗಾರಿಕ ಕಾರ್ಮಿಕರಿಗೆ ಬಹಳ ಅನುಕೂಲಕರವಾಗಿದೆ.

ಹಿಂದಿನ ವ್ಯವಸ್ಥೆಯಲ್ಲಿ ರೇಷನ್ ಪಡೆಯಲು ಬೆರಳಚ್ಚು ದೃಢೀಕರಣ ಕಡ್ಡಾಯವಾಗಿದ್ದು, ಹಲವರಿಗೆ ತೊಂದರೆಯಾಗುತ್ತಿತ್ತು. ವೃದ್ಧರು, ಕೃಷಿ ಕಾರ್ಮಿಕರು, ಅಂಗವಿಕಲರು ಮತ್ತು ಕಠಿಣ ಕೆಲಸ ಮಾಡುವವರ ಬೆರಳಚ್ಚು ಸರಿಯಾಗಿ ಓದಲಾಗದೆ, ರೇಷನ್ ಪಡೆಯಲು ವಿಳಂಬ ಅಥವಾ ನಿರಾಕರಣೆ ಆಗುತ್ತಿದ್ದವು. ಇಂತಹ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ OTP ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಈ ಹೊಸ ವ್ಯವಸ್ಥೆಯಲ್ಲಿ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಆ OTP ಅನ್ನು ನ್ಯಾಯಬೆಲೆ ಅಂಗಡಿಯ ಪಾಯಿಂಟ್ ಆಫ್ ಸೇಲ್ (PoS) ಯಂತ್ರದಲ್ಲಿ ನಮೂದಿಸಿದರೆ ರೇಷನ್ ವಿತರಣೆಯಾಗುತ್ತದೆ. ಇದರಿಂದ ಪ್ರಕ್ರಿಯೆ ಸುಲಭ, ವೇಗ ಮತ್ತು ಪಾರದರ್ಶಕವಾಗುತ್ತದೆ. ತಾಂತ್ರಿಕ ದೋಷಗಳು ಮತ್ತು ಜಾಲ ಸಮಸ್ಯೆಗಳಿದ್ದರೂ OTP ಮೂಲಕ ಪರ್ಯಾಯ ವ್ಯವಸ್ಥೆ ಲಭ್ಯವಾಗುತ್ತದೆ.

OTP ವ್ಯವಸ್ಥೆಯಿಂದ ನಿಜವಾದ ಫಲಾನುಭವಿಗಳಿಗೆ ರೇಷನ್ ತಲುಪುವುದು ಸುಲಭವಾಗಿದ್ದು, ಅನ್ಯಾಯ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಜೊತೆಗೆ ಮಾನವೀಯ ದೃಷ್ಟಿಯಿಂದಲೂ ಇದು ಮಹತ್ವದ ಕ್ರಮವಾಗಿದೆ. ಯಾರೂ ರೇಷನ್‌ನಂತಹ ಮೂಲಭೂತ ಹಕ್ಕಿನಿಂದ ವಂಚಿತರಾಗಬಾರದೆಂಬ ಸರ್ಕಾರದ ಉದ್ದೇಶವನ್ನು ಈ ವ್ಯವಸ್ಥೆ ಪ್ರತಿಬಿಂಬಿಸುತ್ತದೆ.

ಒಟ್ಟಾರೆ, ರೇಷನ್ ಪಡೆಯಲು ಬಯೋಮೆಟ್ರಿಕ್ ಅಗತ್ಯವಿಲ್ಲದೆ OTP ಸಾಕು ಎಂಬ ವ್ಯವಸ್ಥೆ ಜನಪರ, ಸುಲಭ ಮತ್ತು ಪರಿಣಾಮಕಾರಿ ಕ್ರಮವಾಗಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.