Telegram Join My Telegram WhatsApp Join My WhatsApp

Grohlakshmi digital marketing: ಮಹಿಳೆಯರಿಗೆ ಸರ್ಕಾರದಿಂದ ಹೊಸ ಯೋಜನೆಯ ಜಾರಿ.!  ಮನೆಯಲ್ಲಿಯೇ ಕುಳಿತು ಉದ್ಯಮಿಗಳಾಗಲು ಅವಕಾಶ.?

 

Grohlakshmi digital marketing: ಕರ್ನಾಟಕ ರಾಜ್ಯ ಸರ್ಕಾರವು 2023ರ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.  ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿ ಈ ಯೋಜನೆ ಅಡಿಯಲ್ಲಿ ರಾಜ್ಯದ ಕೋಟ್ಯಂತರ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದೆ, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒಟ್ಟು 24  ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದ್ದು ಇದೀಗ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಅಥವಾ ಮಹಿಳೆಯರ ಸಬಲೀಕರಣಕ್ಕಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ.

ಹೌದು ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷವು ಜಾರಿ ಮಾಡಿದ್ದು ಇದು ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿದ್ದು ಮಹಿಳೆಯರ ಸಬಲೀಕರಣಕ್ಕಾಗಿ ಜಾರಿ ಮಾಡಿದ ಯೋಜನೆ ಇದಾಗಿದೆ ಇದರಲ್ಲಿ ರಾಜ್ಯದ ಕೋಟ್ಯಂತರ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಿದ್ದು ಈಗಾಗಲೇ 24 ಕಂತಿನ 48000 ಹಣವನ್ನು ಪಡೆದುಕೊಂಡಿದ್ದಾರೆ. ಸದ್ಯ ಇದೀಗ ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಮತ್ತೊಂದು ಹೊಸ ಯೋಜನೆಯನ್ನು ಹಮ್ಮಿಕೊಂಡಿದ್ದು ಯೋಜನೆಗೆ ಚಾಲನೆ ನೀಡಿದ್ದಾರೆ.

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಜಾರಿ.?

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಇದೀಗ ಮತ್ತೊಂದು ಹೊಸ ಯೋಜನೆಯನ್ನು ರಾಜ್ಯ ಸರ್ಕಾರದಿಂದ ಜಾರಿ ಮಾಡಲಾಗಿದೆ.  ಹೌದು ಮಹಿಳೆಯರ ಸಬಲೀಕರಣಕ್ಕಾಗಿ ಜಾರಿ ಮಾಡಲಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಇನ್ನು ಮುಂದೆ ಮನೆಯಲ್ಲಿಯೇ ಕುಳಿತು  ಉದ್ಯಮಿಗಳಾಗುವ ಅವಕಾಶವನ್ನು ರಾಜ್ಯ ಸರ್ಕಾರ ಮಹಿಳೆಯರಿಗೆ ಮಾಡಿಕೊಟ್ಟಿದೆ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ವೇದಿಕೆ ಆರಂಭಗೊಂಡಿದ್ದು ಗೃಹಿಣಿಯರು ಉದ್ಯಮಿಗಳಾಗಲು ಅವಕಾಶವನ್ನು ಹೊಂದಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಈಗ ಕೇಬಲ್ ಮಹಿಳೆಯರ ಆರ್ಥಿಕ ನೆರವಿಗೆ ಸೀಮಿತ ಆಗದೆ ಮಹಿಳೆಯರನ್ನು ಉದ್ಯಮಿಗಳನ್ನಾಗಿ ರೂಪಿಸುವತ್ತ ಹೆಜ್ಜೆ ಇಟ್ಟಿದೆ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಎಂಬ ನೂತನ ವೆಬ್ಸೈಟ್ ಪ್ರಾರಂಭಿಸಿದೆ ಇದು ರಾಜ್ಯದ ಲಕ್ಷಾಂತರ ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆಯನ್ನು  ಮೂಡಿಸಿದ. 

ಏನಿದು ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್.?

ಸರ್ಕಾರದಿಂದ ಮಹಿಳೆಯರ ಆರ್ಥಿಕ ನೆರವಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ಹಣವನ್ನು ನೀಡುತ್ತಿದೆ ಇದರ ಜೊತೆಗೆ ಮಹಿಳೆಯರನ್ನು ಉದ್ಯಮಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ  ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಎಂಬ ಹೊಸ ಯೋಜನೆಯನ್ನು ಶುರು ಮಾಡಿದ್ದು ಇದಕ್ಕೆ ಸಂಬಂಧ ಪಟ್ಟ ಹಾಗೆ ವೆಬ್ಸೈಟ್ ಕೂಡ ರಾಜ್ಯ ಸರ್ಕಾರ ನೀಡಿದ್ದು ಇದರಲ್ಲಿ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸ್ವಂತ ಉದ್ಯೋಗವನ್ನು ಆರಂಭಿಸಿಕೊಳ್ಳಬಹುದಾಗಿದೆ ಈಗಾಗಲೇ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಲಕ್ಷಾಂತರ ಫಲಾನುಭವಿಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿತ್ತು ರಾಜ್ಯದ ಪ್ರತಿಯೊಬ್ಬ ಮಹಿಳೆಯು ಕೂಡ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತಮ್ಮ ಉದ್ಯಮವನ್ನು ಶುರು ಮಾಡಲು ಸರ್ಕಾರ ಸೂಚನೆ ನೀಡಿದೆ.

ಮಹಿಳೆಯರು ಮನೆಯಲ್ಲಿಯೇ ಕುಳಿತು ಉದ್ಯಮಿಗಳಾಗುವ ಅವಕಾಶ.

 ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಎಂಬ ಹೊಸ ಯೋಜನೆಯನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿ ಮಾಡಿದ್ದು ಇದರಲ್ಲಿ ಮಹಿಳೆಯರು ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರುವ ಮೂಲಕ ಸ್ವಂತ ಉದ್ಯೋಗವನ್ನು ರೂಪಿಸಿಕೊಳ್ಳಬಹುದಾಗಿದೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮಹಿಳಾ ಉದ್ಯಮಿಗಳು ತಾವೇ ತಯಾರಿಸಿದ ಅಥವಾ ತಮ್ಮಲ್ಲಿ ಲಭ್ಯೋರುವ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಈ  ವೇದಿಕೆಯಲ್ಲಿ ಅವಕಾಶವನ್ನು ಕಲ್ಪಿಸುತ್ತದೆ ಇದು ಕರ್ನಾಟಕದ ಅತಿ ಅಂತ ಇರುವ ಪ್ರತಿಭಾವಂತ ಮಹಿಳಾ ಉದ್ಯಮಿಗಳು ತಯಾರಿಸಿದ ಆರ್ಥಿಕ ಕರಕುಶಲ ವಸ್ತುಗಳು,  ಆಹಾರ ಪದಾರ್ಥಗಳು ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಒಂದೇ ಜಾಲತಾಣದಲ್ಲಿ ತರುವ ಡಿಜಿಟಲ್ ಮಾರುಕಟ್ಟೆ ಇದಾಗಿದೆ ಈ ವೇದಿಕೆ ಮೂಲಕ ಸಾರ್ವಜನಿಕರು ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.

ಮಹಿಳೆಯರು ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಸೇರುವುದು ಹೇಗೆ.?

ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಎಂಬ ಹೊಸ ಯೋಜನೆಯ ಮೂಲಕ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು  ಆರಂಭಿಸಬಹುದಾಗಿದೆ ಮತ್ತು ಈ ವೇದಿಕೆಯ ಮೂಲಕ ಮಹಿಳೆಯರು ತಯಾರಿಸಿದ ಮತ್ತು ಅವರ ಬಳಿ ಇರುವ ಉಪಕರಣಗಳನ್ನು ಸಾರ್ವಜನಿಕರು ಇಲ್ಲಿ ಖರೀದಿಸಬಹುದಾಗಿದೆ ನೀವು ಕೂಡ ಇಲ್ಲಿ ಮಾರಾಟ ಮಾಡಬೇಕು ಅಥವಾ ಖರೀದಿ ಮಾಡಬೇಕು ಎಂದಿದ್ದರೆ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ https://gruhalakshmidigital.org ವೆಬ್ ಸೈಟ್ ಮೂಲಕ ನೀವು ಉದ್ಯಮವನ್ನು ಆರಂಭಿಸಬಹುದು ಅಥವಾ ವಸ್ತುಗಳನ್ನು ಖರೀದಿಸಬಹುದು.

ಇನ್ನು ಈ ಯೋಜನೆ ಬಗ್ಗೆ ಮಹಿಳೆಯರಿಗೆ ಗ್ರಾಮೀಣ ವಲಯದಲ್ಲಿ ಸರ್ಕಾರದಿಂದ ತರಬೇತಿ ಮತ್ತು ನೆರವನ್ನು ನೀಡಲಾಗುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ app ಕೂಡ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಕಡೆಯಿಂದ ಮಾಹಿತಿ ನೀಡಲಾಗಿದೆ ನೀವು ಕೂಡ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದು ಸ್ವಂತ ಉದ್ಯಮ ಶುರು ಮಾಡುವ ಆಸಕ್ತಿ ಹೊಂದಿದ್ದಲ್ಲಿ ಈಗಲೇ ಈ ವೆಬ್ಸೈಟ್ https://gruhalakshmidigital.org ವಿಸಿಟ್ ಮಾಡಿ ನಿಮ್ಮ ಸ್ವಂತ  ಉದ್ಯಮವನ್ನು ಶುರು ಮಾಡಿ ಧನ್ಯವಾದಗಳು..

ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಎಂಬುದು ಮಹಿಳಾ ಸಬಲೀಕರಣ, ಸ್ವಾವಲಂಬನೆ ಹಾಗೂ ಡಿಜಿಟಲ್ ತಂತ್ರಜ್ಞಾನ ಬಳಕೆಯ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವ ಉದ್ದೇಶವನ್ನು ಹೊಂದಿರುವ ಮಹತ್ವದ ಉಪಕ್ರಮವಾಗಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಲಾಭಾರ್ಥಿಗಳು, ಸ್ವಸಹಾಯ ಗುಂಪುಗಳ (SHG) ಮಹಿಳೆಯರು ಮತ್ತು ಗ್ರಾಮೀಣ ಉದ್ಯಮಿಗಳನ್ನು ಡಿಜಿಟಲ್ ವೇದಿಕೆಗೆ ಸಂಪರ್ಕಿಸುವುದು ಇದರ ಮುಖ್ಯ ಗುರಿಯಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಮಹಿಳೆಯರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಸ್ಥಳೀಯ ಮಾರುಕಟ್ಟೆಗೆ ಮಾತ್ರ ಸೀಮಿತಗೊಳಿಸದೇ, ಆನ್‌ಲೈನ್ ಮೂಲಕ ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾರಾಟ ಮಾಡಲು ಅವಕಾಶ ಪಡೆಯುತ್ತಾರೆ. ಸಾಮಾಜಿಕ ಜಾಲತಾಣಗಳು, ಇ-ಕಾಮರ್ಸ್ ವೆಬ್‌ಸೈಟ್‌ಗಳು, ವಾಟ್ಸಾಪ್ ಬಿಸಿನೆಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮುಂತಾದ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಉತ್ಪನ್ನಗಳ ಪ್ರಚಾರ, ಬ್ರಾಂಡಿಂಗ್ ಮತ್ತು ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಬಹುದು.

ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಉಪಕ್ರಮದಡಿ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ, ಆನ್‌ಲೈನ್ ವ್ಯವಹಾರ ನಿರ್ವಹಣೆ, ಪಾವತಿ ವ್ಯವಸ್ಥೆಗಳು (UPI, ಆನ್‌ಲೈನ್ ಬ್ಯಾಂಕಿಂಗ್), ಉತ್ಪನ್ನಗಳ ಫೋಟೋಗ್ರಫಿ, ಜಾಹೀರಾತು ತಂತ್ರಗಳು ಹಾಗೂ ಗ್ರಾಹಕ ಸೇವೆ ಕುರಿತು ತರಬೇತಿ ನೀಡಲಾಗುತ್ತದೆ. ಇದರಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ತಂತ್ರಜ್ಞಾನ ಬಳಕೆಯ ಭಯ ದೂರವಾಗುತ್ತದೆ.

ಈ ಯೋಜನೆಯಿಂದ ಮನೆಮಟ್ಟದಲ್ಲಿ ತಯಾರಾಗುವ ಆಹಾರ ಪದಾರ್ಥಗಳು, ಹಸ್ತಕಲಾ ವಸ್ತುಗಳು, ಹೊಲಿಗೆ ಉತ್ಪನ್ನಗಳು, ಜೈವಿಕ ವಸ್ತುಗಳು ಮತ್ತು ಇತರ ಸಣ್ಣ ಉದ್ಯಮಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭಿಸುತ್ತದೆ. ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗುವುದರಿಂದ ನೇರ ಲಾಭ ಮಹಿಳೆಯರ ಕೈ ಸೇರುತ್ತದೆ.

ಒಟ್ಟಾರೆ, ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಮಹಿಳೆಯರನ್ನು ಡಿಜಿಟಲ್ ಆರ್ಥಿಕತೆಯ ಭಾಗವಾಗಿಸಿ, ಅವರ ಆದಾಯ ಹೆಚ್ಚಿಸುವುದರ ಜೊತೆಗೆ ಕುಟುಂಬ ಹಾಗೂ ಸಮಾಜದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಹಿಳೆಯರನ್ನು ಉದ್ಯಮಶೀಲರನ್ನಾಗಿ ರೂಪಿಸುವ ದೀರ್ಘಕಾಲೀನ ಹಾಗೂ ಪರಿಣಾಮಕಾರಿ ಉಪಕ್ರಮವಾಗಿದೆ.