Tractor subsidy scheme: ರೈತರಿಗೆ ಶೇಕಡ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಸಿಗಲಿದೆ,
ಎಲ್ಲರಿಗೂ ನಮಸ್ಕಾರ.. ರೈತರು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ ಏಕೆಂದರೆ ನಮ್ಮ ಭಾರತ ದೇಶವು ಕೃಷಿಯ ಮೇಲೆ ಅವಲಂಬಿತ ಆಗಿದ್ದು ನಮ್ಮ ದೇಶದ ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ ಆಗಿದೆ ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಈಗಾಗಲೇ ಕೇಂದ್ರ ಸರ್ಕಾರದಿಂದ ರೈತರಿಗಾಗಿ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವಿಗಾಗಿ ಪ್ರತಿ ವರ್ಷ ಮೂರು ಹಂತಗಳಲ್ಲಿ 6000 ಹಣವನ್ನು ನೀಡಲಾಗುತ್ತಿದೆ ಅದೇ ರೀತಿ ರೈತರಿಗೆ ರಾಸಾಯನಿಕ ಗೊಬ್ಬರಗಳ ಸಬ್ಸಿಡಿ ಮತ್ತು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಲು ಉಪಕರಣಗಳ ಖರೀದಿಗೆ ಸಬ್ಸಿಡಿಗಳ ಸೌಲಭ್ಯಗಳನ್ನು ನೀಡಲಾಗುತ್ತಿದೆ ಅದೇ ರೀತಿ ಇದೀಗ ಸ್ವಂತ ಟ್ರಾಕ್ಟರ್ ಖರೀದಿಸಬೇಕು ಎಂಬ ಕನಸು ಹೊಂದಿರುವಂತಹ ರೈತರಿಗಾಗಿ ಸಬ್ಸಿಡಿ ಸೌಲಭ್ಯದ ಮೂಲಕ ಟ್ರ್ಯಾಕ್ಟರ್ ವಿತರಣೆ ಮಾಡಲಾಗುತ್ತಿದೆ.
ಕಿಸಾನ್ ಟ್ರ್ಯಾಕ್ಟರ್ ಯೋಜನೆ
ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಬಹುತೇಕ ಜನರು ಕೃಷಿಯನ್ನೇ ಜೀವನೋಪಾಯವಾಗಿ ಅವಲಂಬಿಸಿದ್ದಾರೆ. ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅತ್ಯಂತ ಮುಖ್ಯವಾಗಿದ್ದು, ಅವುಗಳಲ್ಲಿ ಟ್ರ್ಯಾಕ್ಟರ್ ಪ್ರಮುಖವಾದುದು. ಆದರೆ ಎಲ್ಲ ರೈತರೂ ಟ್ರ್ಯಾಕ್ಟರ್ ಖರೀದಿಸಲು ಆರ್ಥಿಕವಾಗಿ ಸಾಮರ್ಥ್ಯ ಹೊಂದಿರುವುದಿಲ್ಲ. ಈ ಸಮಸ್ಯೆಯನ್ನು ಮನಗಂಡು ಸರ್ಕಾರವು “ಕಿಸಾನ್ ಟ್ರ್ಯಾಕ್ಟರ್ ಯೋಜನೆ” ಎಂಬಂತಹ ವಿವಿಧ ಸಹಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು ಆರ್ಥಿಕ ನೆರವು ನೀಡುವುದಾಗಿದೆ.
ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ (ಅನುದಾನ) ನೀಡಲಾಗುತ್ತದೆ. ಸಾಮಾನ್ಯವಾಗಿ ರೈತರ ವರ್ಗ, ಭೂಮಿಯ ಪ್ರಮಾಣ, ಸಾಮಾಜಿಕ ವರ್ಗ (SC/ST/OBC), ಮಹಿಳಾ ರೈತರು ಮುಂತಾದ ಅಂಶಗಳನ್ನು ಆಧರಿಸಿ ಸಬ್ಸಿಡಿ ಪ್ರಮಾಣ ನಿಗದಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ 20% ರಿಂದ 50% ರವರೆಗೆ ಸಬ್ಸಿಡಿ ಸಿಗಬಹುದು. ಇದರ ಮೂಲಕ ರೈತರು ಕಡಿಮೆ ವೆಚ್ಚದಲ್ಲಿ ಟ್ರ್ಯಾಕ್ಟರ್ ಪಡೆಯಲು ಸಾಧ್ಯವಾಗುತ್ತದೆ.
ಈ ಯೋಜನೆಯ ಪ್ರಮುಖ ಲಾಭವೆಂದರೆ ಕೃಷಿ ಕಾರ್ಯಗಳನ್ನು ವೇಗವಾಗಿ ಮತ್ತು ಸುಲಭವಾಗಿ ನಿರ್ವಹಿಸಬಹುದು. ಹೊಲ ಒಡೆಯುವುದು, ಬಿತ್ತನೆ, ಗದ್ದೆ ಸಿದ್ಧಪಡಿಸುವುದು, ಸಾಗಣೆ ಕೆಲಸಗಳು ಮುಂತಾದ ಹಲವಾರು ಕಾರ್ಯಗಳಿಗೆ ಟ್ರ್ಯಾಕ್ಟರ್ ಉಪಯುಕ್ತ. ಇದರಿಂದ ಸಮಯ ಉಳಿತಾಯವಾಗುತ್ತದೆ ಹಾಗೂ ಉತ್ಪಾದಕತೆ ಹೆಚ್ಚುತ್ತದೆ. ಜೊತೆಗೆ ಕಾರ್ಮಿಕರ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ.
ಈ ಯೋಜನೆ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕಾರಿ. ಯಾಂತ್ರೀಕರಣದಿಂದ ಕೃಷಿ ಲಾಭದಾಯಕವಾಗುತ್ತಿದ್ದು, ಯುವಕರನ್ನು ಕೃಷಿಯತ್ತ ಆಕರ್ಷಿಸುತ್ತದೆ. ಗ್ರಾಮೀಣಾಭಿವೃದ್ಧಿಗೂ ಇದು ನೆರವಾಗುತ್ತದೆ.
ಒಟ್ಟಾರೆ, ಕಿಸಾನ್ ಟ್ರ್ಯಾಕ್ಟರ್ ಯೋಜನೆ ರೈತರಿಗಾಗಿ ಮಹತ್ವದ ಹೆಜ್ಜೆಯಾಗಿದೆ. ಇದರ ಪ್ರಯೋಜನವನ್ನು ಪಡೆಯಲು ರೈತರು ತಮ್ಮ ಜಿಲ್ಲೆಯ ಕೃಷಿ ಇಲಾಖೆಯನ್ನು ಸಂಪರ್ಕಿಸಿ ನಿಖರ ಮಾಹಿತಿಯನ್ನು ಪಡೆದು ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸುವುದು ಒಳಿತು.
ಕಿಸಾನ್ ಟ್ರ್ಯಾಕ್ಟರ್ ಯೋಜನೆಯಲ್ಲಿ ಶೇಕಡ 50ರಷ್ಟು ಸಬ್ಸಿಡಿ.?
ರೈತರು ಸ್ವಂತ ಟ್ರಾಕ್ಟರ್ ಖರೀದಿಸಬೇಕು ಎಂದು ಕನಸು ಕಟ್ಟಿದ್ದರೆ ಆ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರವು ಇದೀಗ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಸಹಾಯ ಮಾಡಲು ಮುಂದಾಗಿದ್ದು ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬ್ಬರಿ 50 ಪರ್ಸೆಂಟ್ ನಷ್ಟು ಸಬ್ಸಿಡಿ ಸೌಲಭ್ಯವನ್ನು ನೀಡುತ್ತಿದೆ ಅಂದರೆ ರೈತನು ಹತ್ತು ಲಕ್ಷದ ಟ್ರಾಕ್ಟರ್ ಖರೀದಿಸಿದರೆ ಸರ್ಕಾರವು 5 ಲಕ್ಷವನ್ನು ಸಬ್ಸಿಡಿ ಮೂಲಕ ರೈತನಿಗೆ ನೀಡಲಾಗುತ್ತಿದೆ.
ಹೌದು ಸರಕಾರದಿಂದ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ರೈತನಿಗೆ ಟ್ರ್ಯಾಕ್ಟರ್ ಖರೀದಿಸಲು 50ರಷ್ಟು ಸಬ್ಸಿಡಿ ನೀಡಲಾಗುತ್ತದೆ ಏಕೆಂದರೆ ರೈತರ ಕೆಲಸವನ್ನು ಸುಲಭ ಮಾಡುವುದಕ್ಕೆ ಮತ್ತು ರೈತರ ಮೇಲಿನ ಸಾಲದ ಹೊರೆಯನ್ನು ತಗ್ಗಿಸುವ ಸಲುವಾಗಿ ಮತ್ತು ಈಗಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯುವ ರೈತರು ಸಹ ಕೃಷಿಯಲ್ಲಿ ತೊಡಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಹಣಕಾಸಿನ ನೆರವು ಒದಗಿಸುತ್ತಿದೆ ಇನ್ನು ಈ ಯೋಜನೆಯ ಸೌಲಭ್ಯವನ್ನು ಎಲ್ಲಾ ವರ್ಗದ ಜನರು ಕೂಡ ಪಡೆಯಬಹುದಾಗಿತ್ತು ಆಸಕ್ತಿ ಇರುವಂತಹ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು.
. ಈಗಾಗಲೇ ತಿಳಿಸಿದ ಹಾಗೆ ಕಿಸಾನ್ ಟ್ರಾಕ್ಟರ್ ಯೋಜನೆ ಅಡಿಯಲ್ಲಿ ರೈತರು ಟ್ರ್ಯಾಕ್ಟರ್ ಖರೀದಿಸಲು ಶೇಕಡ 50ರಷ್ಟು ಸಬ್ಸಿಡಿ ಸೌಲಭ್ಯವನ್ನು ಪಡೆಯಬಹುದಾಗಿತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಕೆಲವು ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಅವುಗಳೆಂದರೆ.
- ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಭಾರತದ ಪ್ರಜೆ ಆಗಿರಬೇಕು
- ರೈತರ ವಾರ್ಷಿಕ ಆದಾಯವು ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು
- ಅರ್ಜಿದಾರರು ಈ ಹಿಂದೆ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದಿರಬಾರದು
- ಒಂದು ಕುಟುಂಬಕ್ಕೆ ಈ ಯೋಜನೆ ಅಡಿಯಲ್ಲಿ ಒಂದು ಟ್ರ್ಯಾಕ್ಟರ್ ಸಬ್ಸಿಡಿಗೆ ಮಾತ್ರ ಸಿಗುತ್ತದೆ
- ಅರ್ಜಿದಾರರು ಅಧಿಕೃತ ಭೂ ದಾಖಲೆಗಳು ಅಥವಾ ಕೃಷಿ ಮಾಲೀಕತ್ವದ ಪುರಾವೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ಈ ಮೇಲೆ ತಿಳಿಸಲಾದ ಎಲ್ಲಾ ಅರ್ಹತೆಗಳನ್ನು ಹೊಂದಿದಂತಹ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಬ್ಸಿಡಿ ಸೌಲಭ್ಯವನ್ನು ಪಡೆಯಬಹುದಾಗಿತ್ತು ಅರ್ಜಿ ಸಲ್ಲಿಸಲು ಕೆಲವು ಮುಖ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಅವುಗಳೆಂದರೆ.
ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು
- ರೈತರು ತಮ್ಮ ಆಧಾರ್ ಕಾರ್ಡ್,
- ಭೂಮಿ ದಾಖಲೆಗಳು,
- ಬ್ಯಾಂಕ್ ಖಾತೆ ವಿವರಗಳು
- ನಿವಾಸ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಸ್ ಫೋಟೋಗಳನ್ನು ಸಲ್ಲಿಸಬೇಕು. ಸಾಮಾನ್ಯವಾಗಿ ಕೃಷಿ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರಗಳು ಅಥವಾ ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಹಾಕಬಹುದು. ಕೆಲವೊಮ್ಮೆ ಸಹಕಾರಿ ಬ್ಯಾಂಕ್ಗಳ ಮೂಲಕವೂ ಸಾಲ ಹಾಗೂ ಸಬ್ಸಿಡಿ ಸೌಲಭ್ಯ ಲಭ್ಯವಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ.?
ಕೇಂದ್ರ ಸರ್ಕಾರದ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ ಮತ್ತು ಮುಖ್ಯ ದಾಖಲೆಗಳನ್ನು ಹೊಂದಿದ್ದರೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಪಾಲಿಸಬೇಕಾಗುತ್ತದೆ.
- ಮೊದಲಿಗೆ https://kkisan.karnataka.gov.in ವೆಬ್ಸೈಟ್ ಗೆ ಭೇಟಿ ನೀಡಿ
- ನಂತರ ನಿಮ್ಮ ಗುರುತನ್ನು ಪರೀಕ್ಷಿಸಲು ಆಧಾರ್ ಸಂಖ್ಯೆಯನ್ನು ಬಳಸಿ e-kyc ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
- , ಲಾಗಿನ್ ಮೇಲೆ ಕ್ಲಿಕ್ ಮಾಡಿದ ನಂತರ ಅಪ್ಲಿಕೇಶನ್ ಐಡಿ ಮತ್ತು ಪಾಸ್ವರ್ಡ್ ದೊರೆಯುತ್ತದೆ
- ನಂತರ ಅಪ್ಲಿಕೇಶನ್ ಐಡಿ ಬಳಸಿ ಪೋರ್ಟಲ್ ಗೆ ಲಾಗಿನ್ ಮಾಡಿ ನಿಮ್ಮ ಮೂಲ ವಿವರಗಳಾದ ಬ್ಯಾಂಕ್ ಖಾತೆ ಮಾಹಿತಿ ಮತ್ತು ಭೂಮಿ ದಾಖಲೆಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ನಮೂದಿಸಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
- ಅಥವಾ ಅರ್ಜಿ ಸಲ್ಲಿಸಲು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡುವ ಮೂಲಕ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದು
- ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಸ್ಥಳೀಯ ಸೇವ ಕೇಂದ್ರಕ್ಕೆ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ